
ಮುಂಬೈ: ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ಟೀಕೆ, ಪ್ರತಿಭಟನೆಗಳು ನಡೆದುಬರುತ್ತಿವೆ. ಈ ಬಗ್ಗೆ ನೀವೇನಂತೀರಿ? ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಕೇಳಿದಾಗ, ಜನರಿಗೆ ಪ್ರತಿಭಟಿಸುವ ಸ್ವಾತಂತ್ರ್ಯ ಇದೆ ಎಂದು ಉತ್ತರಿಸಿದ್ದಾರೆ.
ಅದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆ ಬಗ್ಗೆ ಪಿಡಿಪಿ ಮತ್ತು ಎನ್‌ಸಿ ಪಕ್ಷದ ಜತೆಗೆ ನಡೆದ ಮಾತುಕತೆಯ ಬಗ್ಗೆ ಮಾತನಾಡಿದ ಶಾ, ಎರಡೂ ಪಕ್ಷಗಳ ಜತೆ ಮಾತುಕತೆ ನಡೆದಿದೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಆದಾಗ್ಯೂ, ನಾವು ಜಮ್ಮು ಕಾಶ್ಮೀರದಲ್ಲಿ ನಾವೇ ಸರ್ಕಾರ ರಚಿಸಬೇಕೆಂದಿದ್ದೇವೆ ಎಂದಿದ್ದಾರೆ.
ಮರು ಮತಾಂತರ ಮಾಡುವ 'ಘರ್‌ವಾಪಸಿ' ಅಭಿಯಾನದ ಬಗ್ಗೆ ಕೇಳಿದಾಗ, ಎನ್‌ಡಿಎ ಸರ್ಕಾರ ಬಲವಂತದ ಮತಾಂತರ ವಿರುದ್ಧ ಕಾನೂನನ್ನು ತರಲು ಸಿದ್ಧತೆ ನಡೆಸಿದೆ ಎಂದು ಶಾ ಹೇಳಿದ್ದಾರೆ.
Advertisement