
ನವ ದೆಹಲಿ: ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜ್ಞಾನಿ ವಿ ಕೆ ಸಾರಸ್ವತ್ ಹಾಗೂ ಅರ್ಥಶಾಸ್ತ್ರಜ್ಞ ಬಿಬೇಕ್ ದೇಬರಾಯ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಸಮಿತಿಯಲ್ಲಿ ವಿತ್ತ ಮಂತ್ರಿ ಅರುಣ್ ಜೇಟ್ಲಿ, ಗೃಹ ಸಚಿವ ರಾಜನಾಥ್ ಸಿಂಗ್, ರೈಲ್ವೇ ಸಚಿವ ಸುರೇಶ್ ಪ್ರಭು, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಕೂಡ ಇರುತ್ತಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥವರ್ ಚಂದ ಗೆಹಲೋಟ್ ಮತ್ತು ಮಾನ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮಿತಿಯ ವಿಶೇಷ ಆಹ್ವಾನಿತರಾಗಿರುತ್ತಾರೆ.
ಹೊಸವರ್ಷದ ಜನವರಿ ೧ ರಿಂದ ನೀತಿ ಆಯೋಗದ ಚಾಲನೆಗೊಂಡಿದೆ. ಯೋಜನಾ ಆಯೋಗದ ಕಾರ್ಯವನ್ನು ಸದಾ ಪ್ರಶ್ನಿಸುತ್ತಿದ್ದ ಪನಗರಿಯ ಅವರನ್ನು ಈಗ ನೀತಿ ಆಯೋಗವನ್ನು ಮುನ್ನಡೆಸಲು ನೇಮಿಸಲಾಗಿದೆ. ಯೋಜನಾ ಆಯೋಗವನ್ನು ನಿಲ್ಲಿಸ ಅದರ ಬದಲು ನೀತಿ ಆಯೋಗವನ್ನು ಪ್ರಾರಂಭಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರ್ಣಯಿಸಿದ್ದರು. ನೂತನ ನೀತಿ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಮುನ್ನಡೆಸಲಿದ್ದಾರೆ.
Advertisement