ಪಾನ್ ಜತೆ ಕಾಂಡೋಮ್ ಫ್ರೀ!

ಬಿಹಾರದ ಕಟಿಹಾರ್ ಜಿಲ್ಲೆಯ ಫಾಲ್ಕಾ ಬಜಾರ್‌ನಲ್ಲಿರುವ ನಂದ್‌ಲಾಲ್ ಅವರ ಪಾನ್ ಅಂಗಡಿಗೆ ಭೇಟಿ ನೀಡಿದರೆ ಅಲ್ಲಿ ಪಾನ್...
ಪಾನ್ ಜತೆ ಕಾಂಡೋಮ್  (ಸಾಂದರ್ಭಿಕ ಚಿತ್ರ)
ಪಾನ್ ಜತೆ ಕಾಂಡೋಮ್ (ಸಾಂದರ್ಭಿಕ ಚಿತ್ರ)
Updated on

ಕಟಿಹಾರ್: ಬಿಹಾರದ ಕಟಿಹಾರ್ ಜಿಲ್ಲೆಯ ಫಾಲ್ಕಾ ಬಜಾರ್‌ನಲ್ಲಿರುವ ನಂದ್‌ಲಾಲ್ ಅವರ ಪಾನ್ ಅಂಗಡಿಗೆ ಭೇಟಿ ನೀಡಿದರೆ ಅಲ್ಲಿ ಪಾನ್ ಜತೆಗೆ ಕಾಂಡೋಮ್ ಫ್ರೀ ಆಗಿ ಸಿಗುತ್ತದೆ. ಏಡ್ಸ್ ಜಾಗೃತಿ ಮತ್ತು ಜನಸಂಖ್ಯಾ ನಿಯಂತ್ರಣಕ್ಕಾಗಿ ನಂದ್‌ಲಾಲ್ ಕಳೆದ ನವೆಂಬರ್ ನಿಂದ ಪಾನ್ ಜತೆ ಕಾಂಡೋಮ್‌ನ್ನು ಉಚಿತವಾಗಿ ನೀಡುತ್ತಾ ಬರುತ್ತಿದ್ದಾರೆ. ಇದೀಗ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಮಾತ್ರವಲ್ಲ ಏಡ್ಸ್ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ನನ್ನ ಅಂಗಡಿಗೆ ಬರುವ ವಯಸ್ಕರಿಗೆ ಕಾಂಡೋಮ್ ಫ್ರೀಯಾಗಿ ನೀಡುವ ಮೂಲಕ ಸುರಕ್ಷಿತ ಸೆಕ್ಸ್ ಮತ್ತು ಕುಟುಂಬಕ್ಕೆ ಎರಡೇ ಎರಡು ಮಕ್ಕಳನ್ನು ಹೊಂದುವಂತೆ ಅರಿವು ಮೂಡಿಸುತ್ತಿದ್ದೇನೆ ಎಂದು ಲಾಲ್ ಹೇಳುತ್ತಿದ್ದಾರೆ.

45ರ ಹರೆಯದ ಲಾಲ್ ತನ್ನ ಗ್ರಾಹಕರ ಕೈಗೆ ಕಾಂಡೋಮ್ ಪ್ಯಾಕೆಟ್ ನೀಡಿ ಉಪದೇಶ ಕೊಡುತ್ತಾರೆ. ಕೆಲವೊಬ್ಬರು ನನ್ನನ್ನು ವಿಚಿತ್ರವಾಗಿ ನೋಡುವುದುಂಟು. ಆಮೇಲೆ ನಾನು ಅವರಿಗೆ ವಿಷಯವನ್ನು ಮನವರಿಕೆ ಮಾಡಿದ ನಂತರ ಅವರೂ ನನ್ನ ಮಾತಿಗೆ  ತಲೆದೂಗುತ್ತಾರೆ. ಈಗ ನನಗೆ ಯಾರೊಂದಿಗೂ ವ್ಯವಹರಿಸುವುದಕ್ಕೆ ಸಮಸ್ಯೆಯಾಗುವುದಿಲ್ಲ. ಹೆಚ್ಚಿನವರು ಕಾಂಡೋಮ್ ಖರೀದಿಸಲು ನಾಚಿಕೆ ಪಟ್ಟುಕೊಳ್ಳುತ್ತಾರೆ. ಅಂಥವರು ನನ್ನ ಈ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾರೆ.

ನಮ್ಮ ಅಂಗಡಿಯಲ್ಲಿ ಸಾಧಾರಣ 75 ಪ್ಯಾಕೆಟ್ ಕಾಂಡೋಮ್‌ಗಳು ಖರ್ಚಾಗುತ್ತವೆ. ಮೊದಲಿಗೆ ನಾನು ಈ ರೀತಿ ಫ್ರೀಯಾಗಿ ಕಾಂಡೋಮ್ ನೀಡುವುದಕ್ಕೆ ನನ್ನ ಹೆಂಡತಿಯ ವಿರೋಧ ಇತ್ತು. ಕಾಂಡೋಮ್ ಅಷ್ಟು ಕಡಿಮೆ ಬೆಲೆಯಲ್ಲಿ ಸಿಗುವುದಿಲ್ಲವಲ್ಲಾ? ಆದರೆ ನನ್ನ ದುಡಿತದಲ್ಲಿ ಸಿಗುವ ಹಣವನ್ನೇ ಕಾಂಡೋಮ್ ಖರೀದಿಗೆ ಖರ್ಚು ಮಾಡಿ ಜನರಿಗೆ ಫ್ರೀಯಾಗಿ ಕೊಡುತ್ತಿದ್ದೆ. ಆಮೇಲೆ ನಮ್ಮೂರಿನ ಸ್ವಸಹಾಯ ಸಂಘವೊಂದು ನನ್ನ ಸಹಾಯಕ್ಕೆ ಬಂತು. ಆರೋಗ್ಯ ಇಲಾಖೆಗೂ ಈ ವಿಷಯ ಗೊತ್ತಾಗಿ ಅವರೂ ನನ್ನ ಸಹಾಯಕ್ಕೆ ನಿಂತರು ಅಂತಾರೆ ಲಾಲ್.

ಏಡ್ಸ್ ಮತ್ತು ಕುಟುಂಬ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿರುವ ಲಾಲ್ ಅವರನ್ನು ನಾವು ಅಭಿನಂದಿಸುತ್ತೇನೆ. ಜನರಿಗೆ ಕಾಂಡೋಮ್ ಹಂಚುವುದಕ್ಕಾಗಿ ನಾವು ಲಾಲ್ ಅವರಿಗೆ ಕಾಂಡೋಮ್ ಫ್ರೀಯಾಗಿ ಕೊಡುತ್ತಿದ್ದೇವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಪಿಕೆ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com