
ಬೀಜಿಂಗ್: ಅನಧಿಕೃತ ಡ್ರಗ್ ಬಳಕೆದಾರರಿಗೆ ಜಾಗ ಒದಗಿಸಿಕೊಟ್ಟ ಆರೋಪದ ಮೇಲೆ ಖ್ಯಾತ ಹಾಲಿವುಡ್ ನಟ ಜಾಕಿ ಚ್ಯಾನ್ ಅವರ ಮಗನನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಆರು ತಿಂಗಳ ಸಜೆ ನೀಡಲಾಗಿದೆ.
ಅಲ್ಲದೆ ಜೈಸೀ ಚ್ಯಾನ್ (೩೨) ಅವರಿಗೆ ೨೦೦೦ ಯುಅನ್ (೩೨೦ ಡಾಲರ್) ದಂಡ ಕೂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ ನಲ್ಲಿ ಪೊಲೀಸರು ಚ್ಯಾನ್, ತೈವಾನಿ ನಟ ಕೋ ಕೈ ಹಾವು ಇನ್ನಿತರನ್ನು ಚ್ಯಾನ್ ಅವರ ಬೀಜಿಂಗ್ ಅಪಾರ್ಟ್ಮೆಂಟ್ ನಲ್ಲಿ ಬಂಧಿಸಿದ್ದರು. ಚ್ಯಾನ್ ಮತ್ತು ಕೋ, ಗಾಂಜಾ ಸೇವಿಸಿದ್ದು ಪತ್ತೆಯಾಗಿತ್ತು ಹಾಗೂ ೧೦೦ ಗ್ರಾಂ ಗಾಂಜಾವನ್ನು ಚಾನ್ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು.
"ನಾನು ಕಾನೂನನ್ನು ಮುರಿದಿದ್ದೇನೆ. ನಾನು ಶಿಕ್ಷಾರ್ಹ. ಸಮಾಜಕ್ಕೆ ಹಿಂದಿರುಗಿದ ಮೇಲೆ ಮತ್ತೆ ಹೀಗೆ ಮಾಡುವುದಿಲ್ಲ" ಎಂದು ಚಾನ್ ತಿಳಿಸಿದ್ದಾರೆ.
Advertisement