ಬ್ರಿಟನ್ ಮೇಲೆ ಉಗ್ರರ ಕೆಂಗಣ್ಣು

ಸಿರಿಯಾದಲ್ಲಿರುವ ಅಲ್‌ಖೈದಾ ಉಗ್ರರು ಬ್ರಿಟನ್ ದೇಶದ ಮೇಲೆ ಗುರಿಯಿಟ್ಟಿದ್ದು ಸಾಮೂಹಿಕವಾಗಿ...
ಎಂ15ನ ಭದ್ರತಾ ಮುಖ್ಯಸ್ಥ  ಆ್ಯಂಡ್ರು ಪರ್ಕರ್
ಎಂ15ನ ಭದ್ರತಾ ಮುಖ್ಯಸ್ಥ ಆ್ಯಂಡ್ರು ಪರ್ಕರ್

ಲಂಡನ್: ಸಿರಿಯಾದಲ್ಲಿರುವ ಅಲ್‌ಖೈದಾ ಉಗ್ರರು ಬ್ರಿಟನ್ ದೇಶದ ಮೇಲೆ ಗುರಿಯಿಟ್ಟಿದ್ದು ಸಾಮೂಹಿಕವಾಗಿ ದಾಳಿಮಾಡುವ ಸಂಭವವಿದೆ ಎಂಬ ಆಘಾತಕಾರಿ ಸಂಗತಿಯೊಂದನ್ನು ಬ್ರಿಟನ್‌ನ ಎಂ15 ಪತ್ತೇದಾರಿ ಸಂಸ್ಥೆ ಹೊರಹಾಕಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಎಂ15ನ ಭದ್ರತಾ ಮುಖ್ಯಸ್ಥ ಆ್ಯಂಡ್ರು ಪರ್ಕರ್ ಅವರು, ಸಿರಿಯಾ ಮೇಲೆ ಉಗ್ರರು ನಡೆಸಿದ ದಾಳಿಯ ಹಾಗೆ ಲಂಡನ್‌ನಲ್ಲೂ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದು, ದೇಶಾದ್ಯಂತ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಬ್ರಿಟನ್ ದೇಶದ 600ಕ್ಕೂ ಹೆಚ್ಚು ಮಂದಿ ಸಿರಿಯಾ ದೇಶಕ್ಕೆ ತೆರಳುತ್ತಿದ್ದು, ಇವರಲ್ಲಿ ಸಾಕಷ್ಟು ಮಂದಿ ಇಸ್ಲಾಮಿಕ್ ಸ್ಟೇಟ್‌ನ ಉಗ್ರರೊಂದಿಗೆ ಕೈ ಜೋಡಿಸಿದ್ದಾರೆ. ಶೀಘ್ರದಲ್ಲೇ ಬ್ರಿಟನ್ ದೇಶದ ಮೇಲೆ ಸಾಮೂಹಿಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು ಈ ಬಗ್ಗೆ ಗಂಭೀರವಾದ ಎಚ್ಚರಿಕೆಯ ಸಂದೇಶಗಳು ಬರುತ್ತಿವೆ.

ದೇಶದಲ್ಲಿನ ಭದ್ರತಾ ಸಿಬ್ಬಂದಿಗಳಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ತಂತ್ರಜ್ಞಾನದ ಚಟುವಟಿಕೆಗಳಲ್ಲಿ ಉಗ್ರರಿಗಿಂತ ಹೆಚ್ಚಾಗಿ ಭದ್ರತಾ ಸಿಬ್ಬಂದಿಗಳು ಉನ್ನತಮಟ್ಟಕ್ಕೆ ಹೋಗಬೇಕಿದೆ. ನಮ್ಮ ದುರ್ಬಲವನ್ನು ಹುಡುಕಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿರುವ ಉಗ್ರರಿಗೆ ನಾವೇ ದಾರಿ ಮಾಡಿಕೊಡುವಂತಾಗಬಾರದು. ಆದ್ದರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವಂತಹ ಅಗತ್ಯವಿದೆ ಎಂದು ಬ್ರಿಟನ್‌ನ ಭದ್ರತಾ ಸಿಬ್ಬಂದಿಗಳಿಗೆ ಎಚ್ಚರಿಕೆಯ ಸಂದೇಶವನ್ನು ಆ್ಯಂಡ್ರು ಪರ್ಕರ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com