'ಉಗ್ರ' ಶಾಸಕನ ವಿರುದ್ಧ ಅರೆಸ್ಟ್ ವಾರೆಂಟ್

ಪ್ಯಾರಿಸ್ನ ಪತ್ರಿಕಾ ಕಚೇರಿ ಮೇಲೆ ದಾಳಿ ಮಾಡಿದ ಉಗ್ರರಿಗೆ ತಾನು...
ಹಜಿ ಯಾಕೂಬ್ ಖುರೇಶಿ
ಹಜಿ ಯಾಕೂಬ್ ಖುರೇಶಿ

ಲಖನೌ: ಪ್ಯಾರಿಸ್ನ ಪತ್ರಿಕಾ ಕಚೇರಿ ಮೇಲೆ ದಾಳಿ ಮಾಡಿದ ಉಗ್ರರಿಗೆ ತಾನು 51 ಕೋಟಿ ರುಪಾಯಿ ಬಹುಮಾನ ನೀಡಲು ಸಿದ್ಧ ಎಂದಿದ್ದ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಶಾಸಕ ಹಜಿ ಯಾಕೂಬ್ ಖುರೇಶಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.

ಪ್ಯಾರಿಸ್ ಶೂಟೌಟ್ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದ ಬಿಎಸ್ಪಿ ನಾಯಕ ಈಗ ತಲೆಮರೆಸಿಕೊಂಡಿದ್ದು, 'ಉಗ್ರ' ಶಾಸಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಿನ್ನೆ ಪ್ಯಾರಿಸ್ ಶೂಟೌಟ್ ಪ್ರಕರಣದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶದ ಮಾಜಿ ಸಚಿವ, ಉಗ್ರರ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದ್ದಲ್ಲದೆ ಪ್ರವಾದಿಗೆ ಅಗೌರವ ತೊರುವವರಿಗೆ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆ ರೀತಿಯೇ ಉತ್ತರ ನೀಡಬೇಕು ಎಂದಿದ್ದರು.

ಈ ಹಿಂದೆಯೂ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಖುರೇಶಿ ಸುದ್ದಿಯಾಗಿದ್ದರು. 2006ರಲ್ಲಿ ಮೀರತ್ ಸಾರ್ವಜನಿಕ ಸಭೆಯಲ್ಲೇ ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ವ್ಯಂಗ್ಯ ಚಿತ್ರ ಚಿತ್ರಿಸಿದ್ದ ಡ್ಯಾನಿಶ್ ವ್ಯಂಗ್ಯಚಿತ್ರಕಾರನ ಹತ್ಯೆಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದರು. ಇದೀಗ ಪ್ಯಾರಿಸ್‌ನ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ ಉಗ್ರರಿಗೂ 51 ಕೋಟಿ ರುಪಾಯಿ ಬಹುಮಾನ ನೀಡಲು ತಾನು ಸಿದ್ಧ ಎಂದಿದ್ದರು. ಇದಕ್ಕೆ ದೇಶಾದ್ಯಂತ ತೀವ್ರ ವಿರೋದ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com