ಪ್ಯಾರಿಸ್ ದಾಳಿ ಹೊಣೆ ಹೊತ್ತ ಅಲ್‌ಖೈದಾ

ಚಾರ್ಲಿ ಹೆಬ್ಡೋ ಪತ್ರಿಕೆಯ ಮೇಲಿನ ದಾಳಿಯ ಹೊಣೆಯನ್ನು ಅಲ್‌ಖೈದಾದ ಯೆಮೆನಿ ಉಗ್ರ ಸಂಘಟನೆ ಹೊತ್ತುಕೊಂಡಿದೆ....
ಪ್ಯಾರಿಸ್ ದಾಳಿ
ಪ್ಯಾರಿಸ್ ದಾಳಿ

ಪ್ಯಾರಿಸ್: ಚಾರ್ಲಿ ಹೆಬ್ಡೋ ಪತ್ರಿಕೆಯ ಮೇಲಿನ ದಾಳಿಯ ಹೊಣೆಯನ್ನು ಅಲ್‌ಖೈದಾದ ಯೆಮೆನಿ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಫ್ರಾನ್ಸ್‌ನವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಿತಿಯಲ್ಲಿರಿಸಬೇಕು ಎಂದು ಮುನ್ನೆಚ್ಚರಿಕೆ ನೀಡುವ ಸಲುವಾಗಿ ನಾವು ಈ ಕೃತ್ಯವೆಸಗಿದ್ದು ಎಂದು ಉಗ್ರರು ಹೇಳಿಕೊಂಡಿದ್ದಾರೆ.

ಅಲ್‌ಖೈದಾದ ಹಿರಿಯ ಸದಸ್ಯರಾದ ಅಬು ಹರೇತ್ ಅಲ್ ನಜಾರಿ ಅರೇಬಿಯನ್ ಪೆನ್ನಿನ್ಸುಲಾದಿಂದ ಆಡಿಯೋ ರೆಕಾರ್ಡಿಂಗ್ ಕಳಿಸಿದ್ದು, ಅದರಲ್ಲಿ ದಾಳಿಯ ಜವಾಬ್ದಾರಿಯನ್ನು ಅಲ್‌ಖೈದಾ ವಹಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಶನಿವಾರ ಸುದ್ದಿಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಕೆಲವೊಂದು ಫ್ರೆಂಚರು ಪ್ರವಾದಿ ಬಗ್ಗೆ ಒರಟುತನ ತೋರಿಸುತ್ತಾರೆ. ಆದ್ದರಿಂದಲೇ ಪ್ರವಾದಿಯನ್ನು ಹಾಗು ಅಲ್ಲಾಹುವನ್ನು ನಂಬುವ ಜನರು ಹುತಾತ್ಮರಾಗಲು ಬಯಸುತ್ತಾರೆ. ಪ್ರವಾದಿಯನ್ನು ನಂಬುವ ಆ ಜನರು ಫ್ರೆಂಚರಿಗೆ ಯಾವ ರೀತಿ ಪ್ರವಾದಿ ಬಗ್ಗೆ ವಿನೀತವಾಗಿ ನಡೆದುಕೊಳ್ಳಬೇಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿ ಮತ್ತು ಎಲ್ಲೆ ಇದೆ ಎಂಬುದನ್ನು ತೋರಿಸಿಕೊಡುವ ಸಲುವಾಗಿ ಈ ಕೃತ್ಯವನ್ನೆಸಗಿದ್ದಾರೆ ಎಂದು ಅಲ್ ನಜಾರಿ ರೆಕಾರ್ಡಿಂಗ್‌ನಲ್ಲಿ ಹೇಳಿದ್ದಾರೆ.

ಆದಾಗ್ಯೂ, ಇಸ್ಲಾಂ  ವಿರುದ್ಧ ಯುದ್ದ ಸಾರಿದರೆ ಫ್ನಾನ್ಸ್‌ನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಜಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com