
ಬರ್ಲಿನ್ : ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ಫ್ರೆಂಚ್ ಮ್ಯಾಗಜಿನ್ "ಚಾರ್ಲಿ ಹೆಬ್ಡೋ "ಕಚೇರಿ ಮೇಲೆ ದಾಳಿ ನಡೆದ ಬೆನ್ನಲ್ಲೇ ಜರ್ಮನಿಯ ಹ್ಯಾಂಬರ್ಗ್‌ರ್ ಮೋರ್ಗನ್‌ಪೋಸ್ಟ್ ಪ್ರಿಂಟಿಂಗ್ ಪ್ರೆಸ್ ಮೇಲೆಯೂ ದಾಳಿ ನಡೆದಿದೆ.
ಜರ್ಮನಿಯ ಪತ್ರಿಕೆ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರಕಟವಾಗಿ ವಿವಾದಕ್ಕೀಡಾದ ಪ್ರವಾದಿ ಮೊಹಮ್ಮದ್ ಬಗ್ಗೆಯಿರುವ ಕಾರ್ಟೂನ್‌ನ್ನು ಮರುಮುದ್ರಣಗೊಳಿಸಿತ್ತು. ಕಾರ್ಟೂನ್‌ನ್ನು ಮರುಮುದ್ರಣಗೊಳಿಸಿದ್ದಕ್ಕಾಗಿಯೇ ಪತ್ರಿಕಾ ಕಚೇರಿ ಮೇಲೆ ನಿನ್ನೆ ಸ್ಥಳೀಯ ಸಮಯ ಅಪರಾಹ್ನ 2 ಗಂಟೆಗೆ ದಾಳಿ ಮಾಡಲಾಗಿತ್ತು.
ಈ ಬಗ್ಗೆ ಹ್ಯಾಂಬರ್ಗರ್ ಮೋರ್ಗನ್‌ಪೋಸ್ಟ್ ಟ್ವೀಟ್ ಮಾಡಿದ್ದು, ದಾಳಿ ನಡೆದಿರುವುದು ಸತ್ಯ ಎಂದು ಹೇಳಿದೆ.
ಮಧ್ಯಾಹ್ನದ ಮೇಳೆ ಆಗಂತುಕರು ಪತ್ರಿಕಾಕಚೇರಿ ಮೇಲೆ ದಾಳಿ ಮಾಡಿದ್ದು, ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ದಾಳಿಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
Advertisement