
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸತೊಂದು ತಿರುವುಗಳನ್ನು ಪಡೆಯುತ್ತಾ ಬರುತ್ತಿದೆ. ಶಶಿ ತರೂರ್‌ಗೆ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರೂರ್ ಜತೆಗಿನ ಸಂಬಂಧದ ಬಗ್ಗೆ ಸುನಂದಾ ಟ್ವೀಟರ್‌ನಲ್ಲಿ ಜಗಳವಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಆದರೆ ಶಶಿ ತರೂರ್ ಮತ್ತು ಮೆಹರ್ ತರಾರ್ ದುಬೈನಲ್ಲಿ ಜತೆಯಾಗಿ ವಾಸ ಮಾಡಿದ್ದರು ಎಂಬ ಸುದ್ದಿಯೂ ಈಗ ಕೇಳಿಬರುತ್ತಿದೆ.
ತರಾರ್ ಜತೆ ಸುನಂದಾ ಟ್ವೀಟರ್‌ನಲ್ಲಿ ಜಗಳವಾಡಿದ ಮರುದಿನ ಅಂದರೆ ಜನವರಿ 17, 2014 ರ ರಾತ್ರಿ ದಕ್ಷಿಣ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಸುನಂದಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು.
ತರೂರ್ ಮತ್ತು ತರಾರ್ ಸಂಬಂಧದ ಬಗ್ಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದು, ಶಶಿ ತರೂರ್ ತರಾರ್ ಜತೆ ಮೂರು ರಾತ್ರಿ ಕಳೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ತರಾರ್ ಮತ್ತು ತರೂರ್ ದುಬೈನಲ್ಲಿ ಜತೆಯಾಗಿ ಮೂರು ದಿನಗಳ ಕಾಲ ಕಳೆದಿದ್ದಾರೆ ಎಂದು ಸುನಂದಾ ಸಾವು ಪ್ರಕರಣಲ್ಲಿನ ಸಾಕ್ಷಿಯೊಬ್ಬರು ವಿಚಾರಣೆ ವೇಳೆ ಹೇಳಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಶಶಿ ತರೂರ್ ಭಾನುವಾರ ನವದೆಹಲಿಗೆ ತಲುಪಿದ್ದು, ಸುನಂದಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
Advertisement