ಅರವಿಂದ್ ಕೇಜ್ರಿವಾಲ್ ಜನರನ್ನು ದಾರಿತಪ್ಪಿಸುತ್ತಿದ್ದಾರೆ: ಕಾಂಗ್ರೆಸ್
ನವದೆಹಲಿ: ಯಾವುದೇ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವುದಿಲ್ಲ, ಅಥವಾ ಕೆಂಪು ದೀಪದ ವಾಹನಗಳಲ್ಲಿ ಚಲಿಸುವುದಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಹೇಳಿದಕ್ಕೆ ವಿರುದ್ಧವಾಗಿ ನಡೆದುಕೊಂಡರು ಎಂದು ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಅಜಯ್ ಮಾಕೆನ್, ಅಧಿಕಾರಕ್ಕೆ ಬಂದರೆ ಸಾಮಾನ್ಯ ನಾಗರಿಕನ ತರಹ ಬದುಕುತ್ತೇನೆ ಎಂದು ವಚನ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತೇಬಿಟ್ಟರು. ಸರ್ಕಾರಿ ಕಾರಿನ ವಿಷಯವಾಗಲಿ, ಕೆಂಪು ದೀಪವಿರುವ ಕಾರುಗಳಲ್ಲಿ ಚಲಿಸುವುದಾಗಲಿ ಅಥವಾ ತನ್ನ ಸರ್ಕಾರಿ ರಕ್ಷಣೆಯನ್ನು ತೆಗೆದುಕೊಳ್ಳುವ ವಿಷಯದಲ್ಲೂ ಕೇಜ್ರಿವಾಲ್ ತಮ್ಮ ವಚನ ಮುರಿದರು ಎಂದು ದೂರಿದ್ದರೆ.
ಮುಖ್ಯಮಂತ್ರಿ ಆದಮೇಲೆ ಕೇಜ್ರಿವಾಲ್ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅಜಯ್ ಮಾಕೆನ, ಆಪ್ ಪಕ್ಷದ ೪೯ ದಿನಗಳ ದುರಾಡಳಿತವನ್ನು ಜನರಿಗೆ ತಿಳಿಸಲು ಕಿರು ಪುಸ್ತಕವೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ