
ವಾಶಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಮೇಲೆ ಅಮೇರಿಕ ಮುಖಂಡತ್ವದ ಮೈತ್ರಿಕೂಟ ದೇಶಗಳು ದಾಳಿಯನ್ನು ತೀವ್ರಗೊಳಿಸಿದ್ದು ೨೪ ಘಂಟೆಗಳಲ್ಲಿ ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ೨೯ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿದು ಬಂದಿದೆ.
ಸುಮಾರು ೭ ಇರಾಕ್ ನಗರಗಳಲ್ಲಿ ನಡೆದ ೧೬ ದಾಳಿಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ವಾಹನಗಳು, ಕಟ್ಟಡಗಳು, ಯುದ್ಧ ಕ್ಷೇತ್ರಗಳನ್ನು ನಾಶಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಮಧ್ಯ ಪೂರ್ವ ದೇಶಗಳಲ್ಲಿ ಕ್ಯಾಲಿಫೇಟ್ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶದಿಂದ ವಿಶ್ವದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿದೆ.
ಸಿರಿಯಾದಲ್ಲಿ ನಡೆದ ೧೧ ವೈಮಾನಿಕ ದಾಳಿಗಳಲ್ಲಿ, ಯುದ್ಧ ಕ್ಷೇತ್ರಗಳು, ಐ ಎಸ್ ನ ಯುದ್ಧ ಟ್ಯಾಂಕ್ ಗಳನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಮತ್ತು ಶನಿವಾರ ಮುಂಜಾನೆಯ ಮಧ್ಯೆ ಈ ದಾಳಿ ನಡೆದಿದೆ.
Advertisement