ಐಐಎಂ ವಿಶಾಖಪಟ್ಟಣ ಶಿಲಾನ್ಯಾಸ ಮಾಡಿದ ಸ್ಮೃತಿ ಇರಾನಿ

ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗಂಭೀರಮ್ ಗ್ರಾಮದಲ್ಲಿ 'ಭಾರತೀಯ ಪ್ರಭಂದಕ ಸಂಸ್ಥೆ' (ಐಐಎಂ)
ಸ್ಮೃತಿ ಇರಾನಿ (ಸಂಗ್ರಹ ಚಿತ್ರ)
ಸ್ಮೃತಿ ಇರಾನಿ (ಸಂಗ್ರಹ ಚಿತ್ರ)

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗಂಭೀರಮ್ ಗ್ರಾಮದಲ್ಲಿ 'ಭಾರತೀಯ ಪ್ರಭಂದಕ ಸಂಸ್ಥೆ' (ಐಐಎಂ) ಸ್ಥಾಪನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶಿಲಾನ್ಯಾಸ ಮಾಡಿದ್ದಾರೆ.

ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು, ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಇತರ ರಾಜ್ಯ ಸಚಿವರು, ಲೋಕಸಭಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಪ್ರತಿಷ್ಟಿತ ಸಂಸ್ಥೆಯ ಸ್ಥಾಪನೆಯ ಮೂಲಕ ಸರ್ಕಾರ ಆಂಧ್ರ ಪ್ರದೇಶದ ಯುವಕರ ಕನಸುಗಳನ್ನು ನನಸು ಮಾಡುತ್ತಿದೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ..

ಸುಮಾರು ೪೦೦ ಎಕರೆ ಜಾಗದಲ್ಲಿ ಸ್ಥಾಪನೆಯಾಗುತ್ತಿರುವ ಐ ಐ ಎಂ ವಿಶಾಖಪಟ್ಟಣ, ವಿಭಜನೆಯ ನಂತರದ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ೧೧ ಸಂಸ್ಥೆಗಳಲ್ಲಿ ಮೊದಲನೆಯದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com