ಯುಪಿಎ ಸರ್ಕಾರ ಸೆನ್ಸಾರ್ ಮಂಡಳಿಯನ್ನು ರಾಜಕೀಯಗೊಳಿಸಿತ್ತು: ಅರುಣ್ ಜೇಟ್ಲಿ

ಎನ್ ಡಿ ಎ ಸರ್ಕಾರ ಸೆನ್ಸಾರ್ ಮಂಡಳಿಯಿಂದ ಅಂತರ ಕಾಯ್ದುಕೊಂಡಿದೆ ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಎನ್ ಡಿ ಎ ಸರ್ಕಾರ ಸೆನ್ಸಾರ್ ಮಂಡಳಿಯಿಂದ ಅಂತರ ಕಾಯ್ದುಕೊಂಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿ ಶನಿವಾರ ತಿಳಿಸಿದ್ದಾರೆ.

ಸೆನ್ಸಾರ್ ಮಂಡಳಿಯನ್ನು ಹಿಂದಿನ ಯು ಪಿ ಎ ಸರ್ಕಾರ ರಾಜಕೀಯಗೊಳಿಸಿತ್ತು ಎಂದಿರುವ ಜೇಟ್ಲಿ ಯುಪಿಎ ನೇಮಿಸಿದ ಸದಸ್ಯರು ದಿನನಿತ್ಯದ ಮಂಡಳಿ ವಿಷಯಗಳಿಗೆ ರಾಜಕೀಯ ಬಣ್ಣ ಬಳಿಯುತ್ತಿರುವುದು ವಿಷಾದನೀಯ ಎಂದಿದ್ದಾರೆ.

ಸೆನ್ಸಾರ್ ಮಂಡಳಿಯ ಕೆಲಸಗಳಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ನೆನ್ನೆ ರಾಜೀನಾಮೆ ನೀಡಿದ್ದರು. ಇಂದು ಲೀಲಾ ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಮಂಡಳಿಯ ಇತರ ೯ ಸದಸ್ಯರು ಗುಂಪಾಗಿ ರಾಜೀನಾಮೆ ನೀಡಿದ್ದರು. ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನಟನೆಯ 'ಮೆಸೆಂಜರ್ ಆಫ್ ಗಾಡ್' ಸಿನೆಮಾದ ಸೆನ್ಸಾರ್ ಸುತ್ತ ನಡೆದ ವಿವಾದ ಇದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com