ಒಬಾಮಾ 'ದ ಬೀಸ್ಟ್' - ಬಾಂಬು-ಬುಲೆಟ್ ಗೂ ಜಗ್ಗದ 'ಗಾಲಿಗಳ ಮೇಲಿನ ಕೋಟೆ'!

ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸುತ್ತಿರುವ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರ ವಾಹನ ಅಕ್ಷರಶಃ 'ಗಾಲಿಗಳ ಮೇಲಿನ ಕೋಟೆಯೇ'! ಇದು ಯಾವುದೇ ಉಗ್ರಗಾಮಿ ದಾಳಿಯಿಂದ ಅವರನ್ನು ರಕ್ಷಿಸಲಿದೆ ಹಾಗೆಯೇ...
'ದ ಬೀಸ್ಟ್' ಕಾರು
'ದ ಬೀಸ್ಟ್' ಕಾರು

ನವದೆಹಲಿ:  ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸುತ್ತಿರುವ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರ ವಾಹನ ಅಕ್ಷರಶಃ 'ಗಾಲಿಗಳ ಮೇಲಿನ ಕೋಟೆಯೇ'! ಇದು ಯಾವುದೇ ಉಗ್ರಗಾಮಿ ದಾಳಿಯಿಂದ ಅವರನ್ನು ರಕ್ಷಿಸಲಿದೆ ಹಾಗೆಯೇ ತಮ್ಮ ಕಛೇರಿಯೊಂದಿಗೆ ಒಬಾಮಾ ನಿರಂತರ ಸಂಪರ್ಕದಲ್ಲಿರುವಂತೆ ಕಾಪಾಡುತ್ತದೆ.

ಸದ್ಯ ನಿಗದಿಯಾದ ಕಾರ್ಯಕ್ರಮದಂತೆ ಸೋಮವಾರ ಬೆಳಗ್ಗೆ ಒಬಾಮಾ ಅವರು ಭಾರತದ ರಾಷ್ಟ್ರಪತಿ ಭವನಕ್ಕೆ ಬರಲಿದ್ದಾರೆ.

ಪ್ರೆಸಿಡೆಂಟ್ ಒಬಾಮಾ ಅವರು ತಮ್ಮ ಕಾರಾದ ಬುಲೆಟ್ ನಿರೋಧಿತ ಲಿಮೋ- 'ದ ಬೀಸ್ಟ್' ನಲ್ಲಿ ಚಾಲನೆ ಮಾಡಲಿದ್ದಾರೆ ಎಂದು ಊಹಿಸಲಾಗಿದೆ. ೧೮ ಅಡಿ ಉದ್ದವಿರುವ ಈ ಕಾರು, ೮ ಟನ್ ತೂಗುತ್ತದೆ. ಬಾಂಬು-ಬುಲೆಟ್ ಗಳ ದಾಳಿಗೆ ಈ ಬೀಸ್ಟ್ ಜಗ್ಗುವುದಿಲ್ಲ. ಇದರ ಬುಲೆಟ್ ನಿರೋಧಿ ಪದರವೇ ೮ ಅಂಗುಲ! ಇದರ ಟಯರ್ ಗಳು ಪಂಕ್ಚರ್ ಆಗುವುದೇ ಇಲ್ಲ, ಇನ್ನು ಸ್ಫೋಟಿಸುವುದು ದೂರದ ಮಾತು.

ಈ ಕಾರ್ ಸುಸಜ್ಜಿತ ಆಮ್ಲಜನಕ ತುಂಬಿದ ಡಬ್ಬ, ಬೆಂಕಿ ಅವಘಡಗಳನ್ನು ತಪ್ಪಿಸುವ ಸಲಕರಣೆಗಳು, ರಾತ್ರಿ ನೋಟದ ಕ್ಯಾಮರಾ ಹೊಂದಿದೆ. ಅಮೇರಿಕಾದ ಬೇಹುಗಾರಿಕೆ ಸಂಸ್ಥೆಯಿಂದ ತರಬೇತಿ ಹೊಂದಿರುವ ಚಾಲಕ ಈ ವಾಹನವನ್ನು ಮುನ್ನಡೆಸಲಿದ್ದು, ೧೮೦ ಡಿಗ್ರಿ ಕೋನದಲ್ಲಿ ತಿರುಗಿಸುವ ಸಾಮರ್ಥ್ಯ ಇದೆ.

ಅಮೇರಿಕಾ ರಾಷ್ಟ್ರಾಧ್ಯಕ ಎಲ್ಲೇ ಇದ್ದರೂ, ಬೀಸ್ಟ್ ಅವರನ್ನು ಅಧ್ಯಕ್ಷರ ಕಛೇರಿಯ ಜೊತೆ ಸದಾ ಸಂಪರ್ಕದಲ್ಲಿಟ್ಟಿರುತ್ತದೆ. ಹಾಗೆಯೇ ಇದರಲ್ಲಿನ ಸಟಲ್ಲೈಟ್ ದೂರವಾಣಿ ನೇರವಾಗಿ ಪೆಂಟಗಾನ್ ನ ಉಪಾಧ್ಯಕ್ಷರನ್ನು ಸಂಪರ್ಕಿಸುತ್ತದೆ.

ಒಬಾಮಾ ಭಾರತೀಯ ಕಾರನ್ನು ಬಳಸುತ್ತಾರೋ ಅಥವಾ ತಮ್ಮ ಕಾರು 'ದ ಬೀಸ್ಟ್' ಬಳಸುತ್ತಾರೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com