೭೨ ಘಂಟೆಗಳಲ್ಲಿ ೨೦೦ಮಿಲಿಯನ್ ಡಾಲರ್ ನೀಡದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ: ಇಸ್ಲಾಮಿಕ್ ಸ್ಟೇಟ್

ಅಂತರ್ಜಾಲದಲ್ಲಿ ಬಿಡುಗಡೆಯಾಗಿರುವ ವಿಡಿಯೋ ಒಂದರಲ್ಲಿ, ೭೨ ಘಂಟೆಗಳಲ್ಲಿ ೨೦೦ ಮಿಲಿಯನ್ ಡಾಲರ್ ಹಣವನ್ನು ಅವರು ಪಡೆಯದೇ ಹೋದರೆ...
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಹಿಡಿದಿರುವ ಜಪಾನಿ ಒತ್ತೆಯಾಳುಗಳು
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಹಿಡಿದಿರುವ ಜಪಾನಿ ಒತ್ತೆಯಾಳುಗಳು

ಕೈರೋ: ಅಂತರ್ಜಾಲದಲ್ಲಿ ಬಿಡುಗಡೆಯಾಗಿರುವ ವಿಡಿಯೋ ಒಂದರಲ್ಲಿ, ೭೨ ಘಂಟೆಗಳಲ್ಲಿ ೨೦೦ ಮಿಲಿಯನ್ ಡಾಲರ್ ಹಣವನ್ನು ಅವರು ಪಡೆಯದೇ ಹೋದರೆ ಇಬ್ಬರು ಜಪಾನಿ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ತಿಳಿಸಿದೆ.

ಇಸ್ಲಾಮಿಕ್ ಸ್ಟೇಟ್ ನ ಮಾಧ್ಯಮ ವಿಭಾಗವಾದ ಆಲ್-ಫುರ್ಕನ್ ಈ ವಿಡಿಯೊ ತಯಾರಿಸಿ ತಮಗೆ ಸೇರಿದ ಒಂದು ತಂತರ್ಜಾಲ ತಾಣದಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ನೇರವಾಗಿ ಜಪಾನಿನ ಪ್ರಧಾನಿ ಶಿಜ್ನೋ ಅಬೆ ಅವರಿಗೆ ಹಣ ನೀಡುವಂತೆ ಆಗ್ರಹಿಸಲಾಗಿದೆ.ಸದ್ಯಕ್ಕೆ ಶಿಜ್ನೋ ಅಬೆ ಮಧ್ಯ ಪ್ರಾಚ್ಯ ದೇಶಗಳಿಗೆ ಜಪಾನ್ ದೇಶದ ನೂರಾರು ಸರ್ಕಾರಿ ಅಧಿಕಾರಿಗಳು ಹಾಗು ಉದ್ಯಮಿಗಳೊಂದಿಗೆ ಪ್ರವಾಸ ನಡೆಸಿದ್ದಾರೆ.

ಜೆರುಸೇಲಮ್ ನಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಅಬೆ, ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುತ್ತೇವೆ. ಅವರ ಜೀವ ನಮಗೆ ಬಹು ಮುಖ್ಯ ಎಂದಿರುವ ಅವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಕೇಳಿದ್ದಾರೆ. ಹಾಗೆಯೇ ಉಗ್ರವಾದ ಮತ್ತು ಇಸ್ಲಾಂ ಎರಡೂ ವಿಭಿನ್ನ ಸಂಗತಿಗಳು ಎಂದಿದ್ದಾರೆ.

ಈ ಹಿಂದೆ ಹಲವಾರು ಪತ್ರಕರ್ತರ ತಲೆ ತೆಗೆದು ಕೊಲೆ ಮಾಡಿದ ವಿಡಿಯೋಗಳನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ತನ್ನ ಅಂತರ್ಜಾಲ ತಾಣದಲ್ಲಿ ಹಾಕಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com