ಶಾಂತಿ ಸಭೆ ಕುರಿತು ಮುರುಗನ್ ಹೇಳಿಕೆ ನೀಡಲಿ: ಹೈಕೋರ್ಟ್

ತಮ್ಮ ಕಾದಂಬರಿ ಮಾಧುರುಭಾಗನ್ ಕುರಿತ ಇತ್ತೀಚಿನ ವಿವಾದಗಳು ಹಾಗೂ ತಮ್ಮ ತವರೂರಾದ ...
ಪೆರುಮಾಳ್ ಮುರುಗನ್
ಪೆರುಮಾಳ್ ಮುರುಗನ್

ಚೆನ್ನೈ: ತಮ್ಮ ಕಾದಂಬರಿ ಮಾಧುರುಭಾಗನ್ ಕುರಿತ ಇತ್ತೀಚಿನ ವಿವಾದಗಳು ಹಾಗೂ ತಮ್ಮ ತವರೂರಾದ ನಾಮಕ್ಕಲ್ ನಲ್ಲಿ ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪೆರುಮಾಳ್ ಮುರುಗನ್ ಅವರಿಗೆ ಮದ್ರಾಸ್ ಉಚ್ಛ ನ್ಯಾಯಾಲಯ ಮಂಗಳವಾರ ಸೂಚಿಸಿದೆ.

ತಮಿಳುನಾಡು ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಎಸ್ ತಮಿಳುಸೆಲ್ವನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಾಧೀಶ ಎಸ್ ಕೆ ಕೌಲ್ ಮತ್ತು ನ್ಯಾಯಾಧೀಶ ಎಂ ಎಂ ಸುಂದರೇಶನ್ ಅವರನ್ನು ಒಳಗೊಂಡ ಪೀಠದ ಎದುರು ವಿಚಾರಣೆಗೆ ಬಂದಾಗ, ಕಾಂದಬರಿಯ ಲೇಖಕನ ನಿಲುವು ತಿಳಿಯುವುದು ಅವಶ್ಯಕ ಎಂದು ವಿಚಾರಣೆಯನ್ನು ಮುಂದೂಡಲಾಯಿತು. ಜನವರಿ ೧೨ ರಂದು ಶಾಂತಿ ಸಭೆಯಲ್ಲಿ ಬಲಪ್ರಯೋಗದಿಂದ ಮುರುಗನ್ ಅವರಿಂದ ತಪ್ಪೊಪ್ಪಿಗೆ ಪಡೆದಿದ್ದಾರೆ ಎಂದು ತಿಳಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದು ಸಂವಿಧಾನಕ್ಕೆ ವಿರೋಧ ಎಂದು ತಿಳಿಸಿ ಅದನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಮನವಿ ಮಾಡಿತ್ತು.

ನ್ಯಾಯಾಂಗದಿಂದ ಹೊರಗೆ ಇರುವುವರು ಲೇಖಕನಿಗೆ ಯಾವುದು ಸರಿ ಯಾವುದು ಸರಿಯಲ್ಲ ಎಂದು ಹೇಳಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಹಾಗೆಯೇ ಮುರುಗನ್ ಅವರಿಗೆ ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಗೆ ಪಡೆದಿದ್ದಾರೆ ಎಂದು ನಿರ್ಧರಿಸಿವುದು ಕೂಡ ಕಷ್ಟ ಎಂದು ಅಭಿಪ್ರಾಯ ಪಟ್ಟಿದೆ.

ಒಟ್ಟಿನಲ್ಲಿ ಶಾಂತಿ ಸಭೆಯ ನಡಾವಳಿಯನ್ನು ಒಪ್ಪಿಕೊಳ್ಳದ ನ್ಯಾಯಾಲಯ, ಜಿಲ್ಲಾಡಳಿತ ಪ್ರತಿಭಟನನಿರತ ಸಂಘಗಳಿಗೆ ಲಿಖಿತ ದೂರು ನೀಡುವಂತೆ ಸೂಚಿಸಬೇಕಿತ್ತು. ಕಾದಂಬರಿಯಲ್ಲಿ ಏನಾದರೂ ವಿವಾದಾತ್ಮಕ ಬರಹ ಇದ್ದಾರೆ ಅದು ನ್ಯಾಯಾಲಯದಲ್ಲೇ ವಿಚಾರಣೆ ಆಗಬೇಕೆ ಹೊರತು ನ್ಯಾಯಾಂಗ ಹೊರತಾದ ಸಂಘಗಳ ಒತ್ತಡಕ್ಕೆ ಜಿಲ್ಲಾಡಳಿತ ಮಣಿಯಬಾರದು. ಮುರುಗನ್ ಅವರ ತಪ್ಪೊಪ್ಪಿಗೆ ಪತ್ರವನ್ನಷ್ಟೆ ಮಾನ್ಯವಲ್ಲ ಎಂದು ಹೇಳುವುದರ ಬದಲು ಅರ್ಜಿದಾರ ಹೇಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪೆಟ್ಟು ಬಿದ್ದಿದೆ ಎಂದು ವಿವರಿಸಬೇಕು ಆಗ ಈ ವಿಷಯದಲ್ಲಿ ನ್ಯಾಯಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸಿ ತೀರ್ಪು ನೀಡಬಹುದು ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com