
ರಿಯಾದ್: ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಬಿನ್ ಅಬ್ದುಲ್ಲಜೀಜ್ ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ನಿಮೋನಿಯಾ ಬಾಧಿತರಾಗಿದ್ದ ಅಬ್ದುಲ್ಲಾ ಅವರನ್ನು ಡಿಸೆಂಬರ್ 31ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರಿಗೆ ಟ್ಯೂಬ್ ಮೂಲಕ ಪರ್ಯಾಯ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಬ್ದುಲ್ಲಾ ಬಿನ್ ಅಬ್ದುಲ್ಲಜೀಜ್ ಅಲ್ ಸೌದ್ ಅವರು ಮಧ್ಯರಾತ್ರಿ 1.00 ಗಂಟೆಯ ವೇಳೆಗೆ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ರಾಷ್ಟ್ರ ಹಾಗು ಕುಟುಂಬ ಸಂತಾಪ ಸೂಚಿಸುತ್ತಿದೆ. ಅವರ ನಿಧನದಿಂದಾಗಿ ತೆರವಾಗಿರುವ ಸಿಂಹಾಸನಕ್ಕೆ ರಾಜನನ್ನಾಗಿ ಸಲ್ಮಾನ್ ಬಿನ್ ಅಬ್ದುಲ್ಲಜೀಜ್ ಅಲ್ ಸೌದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸೌದಿ ರಾಜಕುಟುಂಬದ ಅಧಿಕೃತ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ನಂತರ ಅಬ್ದುಲ್ಲಾ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
Advertisement