
ದೆಹಲಿ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭಾನುವಾರ ಭೇಟಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ತೊಟ್ಟ ಡ್ರೆಸ್ ಗಮನ ಸೆಳೆದುದು ಮಾತ್ರವಲ್ಲದೆ ಅದನ್ನು ನೋಡಿ ಒಬಾಮಾ ಅಚ್ಚರಿಪಟ್ಟಿದ್ದರಂತೆ!
ಹೈದ್ರಾಬಾದ್ ಹೌಸ್‌ನಲ್ಲಿ ಒಬಾಮಾ ಜತೆ ಚಾಯ್ ಪೆ ಚರ್ಚಾದಲ್ಲಿ ಪಾಲ್ಗೊಂಡಾಗ ಮೋದಿ ಧರಿಸಿದ್ದ ಸೂಟ್ ವಿಶಿಷ್ಟವಾಗಿತ್ತು. ಹಾಗಾದರೆ ಅದರಲ್ಲಿ ಅಂತದ್ದೇನಿತ್ತು?
ಮೋದಿ ಧರಿಸಿದ 'ಬಂಧ್‌ಗಾಲಾ' ಕಡು ನೀಲಿ ಸೂಟ್‌ನಲ್ಲಿ ಬಿಳಿಯ ಗೆರೆಯಂತೆ ಕಾಣುವ ಫ್ಯಾಬ್ರಿಕ್‌ನಲ್ಲಿ 1000 ಬಾರಿ 'ನರೇಂದ್ರ ದಾಮೋದರ್‌ದಾಸ್ ಮೋದಿ' ಎಂದು ಬರೆಯಲಾಗಿತ್ತು. ತುಂಬಾ ಅಪರೂಪದ ಡ್ರೆಸ್‌ನ್ನು ಧರಿಸುವ ಮೂಲಕ ಮೋದಿ ಒಬಾಮಗೂ ಅಚ್ಚರಿಯನ್ನುಂಟು ಮಾಡಿದ್ದರು.
ಚಾಯ್ ಪೆ ಚರ್ಚಾ ಕಾರ್ಯಕ್ರಮದ ಫೋಟೋಗಳನ್ನು ಸೆರೆಹಿಡಿಯಲು ಬಂದ ಕೆಲವು ಫೋಟೋಗ್ರಾಫರ್‌ಗಳಿಗಷ್ಟೇ ಮೋದಿ ಸೂಟ್‌ನಲ್ಲಿರುವ ಮೋದಿ ಹೆಸರು ಕಣ್ಣಿಗೆ ಬಿದ್ದಿತ್ತು. ಸೋಮವಾರ ಸಾಮಾಜಿಕ ತಾಣಗಳಲ್ಲಿ ಮೋದಿ ವಿಶೇಷ ಸೂಟ್‌ನ ಜೂಮ್ ಮಾಡಿದ ಫೋಟೋಗಳು ಪ್ರಕಟವಾಗಿದ್ದು, ಮೋದಿ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಬಹುಪರಾಕ್ ಕೇಳಿಬರುತ್ತಿದೆ.
Advertisement