ಆರ್ ಕೆ ಲಕ್ಷ್ಮಣ್ ಸೃಷ್ಟಿಸಿದ ಸಾಮಾನ್ಯ ಮನುಷ್ಯ
ಪ್ರಧಾನ ಸುದ್ದಿ
ಆರ್ ಕೆ ಲಕ್ಷ್ಮಣ್ ಅಗಲಿದ್ದು ನನಗೆ ವೈಯಕ್ತಿಕ ನಷ್ಟ: ರಾಷ್ಟ್ರಪತಿ
ಆರ್ ಕೆ ಲಕ್ಷ್ಮಣ್ ನಮ್ಮನ್ನಗಲಿದ್ದು ಕ್ರಿಯಾಶೀಲ ಕ್ಷೇತ್ರದಲ್ಲಿ ಶೂನ್ಯವಾದಂತೆ, ಅದನ್ನು ಮತ್ತೆ ಭರಿಸುವುದು ಕಷ್ಟ
ನವದೆಹಲಿ: ಆರ್ ಕೆ ಲಕ್ಷ್ಮಣ್ ನಮ್ಮನ್ನಗಲಿದ್ದು ಕ್ರಿಯಾಶೀಲ ಕ್ಷೇತ್ರದಲ್ಲಿ ಶೂನ್ಯವಾದಂತೆ, ಅದನ್ನು ಮತ್ತೆ ಭರಿಸುವುದು ಕಷ್ಟ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಗಲಿದ ವ್ಯಂಗ್ಯಚಿತ್ರಕಾರನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಲಕ್ಷ್ಮಣ್ ವಿಧಿವಶರಾಗಿದ್ದು ನನಗೆ ಅತೀವ ದುಃಖ ತಂದಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
"ನಾನು ವೈಯಕ್ತಿಕವಾಗಿ ಏನೋ ಕಳೆದುಕೊಂಡಿದ್ದೇನೆ ಏಕೆಂದರೆ ನಾನು ಅವರ ಕಾರ್ಟೂನ್ ಗಳನ್ನು ಸದಾ ಗಮನಿಸುತ್ತಿದ್ದೆ ಹಾಗೆಯೇ ಅವರ ಕಾರ್ಟೂನ್ ಗಳಿಗೆ ನಾನು ವಿಷಯವಾಗಿದ್ದೆ.
"ಸಾಮಾನ್ಯ ಮನುಷ್ಯನನ್ನು ದೇಶದ ಲಾಂಛನ ಮಾಡಿದ ಈ ಅಸಾಧಾರಣ ಪ್ರತಿಭೆಯನ್ನು ದೇಶ ಕಳೆದುಕೊಂಡಿದೆ. ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ಅವರು ಹಲವಾರು ಸಾಮಾಜಿಕ ಸಂದೇಶಗಳನ್ನು ನೀಡುತ್ತಿದ್ದರು" ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪದ್ಮವಿಭೂಷಣ ವಿಜೇತ ಕಾರ್ಟೂನಿಷ್ಟ್ ಲಕ್ಷ್ಮಣ್ ರಾಷ್ಟ್ರದ ಅಂತಃಸಾಕ್ಷಿಯನ್ನು ಎಚ್ಚರಿಕೆಯಲ್ಲಿಟ್ಟಿದ್ದ ವ್ಯಕ್ತಿ ಅವರು ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ