ಜಗ್ತರ್ ಸಿಂಗ್ ಅಲಿಯಾಸ್ ತಾರಾ
ಜಗ್ತರ್ ಸಿಂಗ್ ಅಲಿಯಾಸ್ ತಾರಾ

ತಾರಾ-ಐ ಎಸ್ ಐ ನಂಟು ಬಹಿರಂಗ

ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ

ಚಂಡಿಘರ್: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರನ್ನು ಹತ್ಯೆಗೈದ ಸಿಖ್ ಉಗ್ರಗಾಮಿ ಜಗ್ತರ್ ಸಿಂಗ್ ಅಲಿಯಾಸ್ ತಾರಾ ಅವರ ವಿಚಾರಣೆ ವೇಳೆಯಲ್ಲಿ ಪಾಕಿಸ್ತಾನದ ಐ ಎಸ್ ಐ ಜೊತೆ ಸಿಕ್ ಉಗ್ರಗಾಮಿಗಳು ಕೂಡಿಕೊಂಡು ದಕ್ಷಿಣ-ಪೂರ್ವ ಏಶಿಯಾ ದೇಶಗಳಲ್ಲಿ ಯುವಕರನ್ನು ಆಯ್ಕೆ ಮಾಡಿ ಭಯೋತ್ಪಾದಕ ಶಿಬಿರಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊರಗೆಡವಿದ್ದಾನೆ.

ಕಳೆದು ಎರಡು ತಿಂಗಳಲ್ಲಿ ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶಗಳಿಂದ ೪ ಸಿಕ್ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಥೈಲ್ಯಾಂಡ್ ನಲ್ಲಿ ತಾರಾ ನ ಬಂಧನದ ನಂತರ ರಾಜ್ಯ ಬೇಹುಗಾರಿಕಾ ಪೊಲೀಸ್ ವಿಭಾಗ ಸುಮಾರು ೧೨ ಪಂಜಾಬಿ ಯುವಕರನ್ನು ಪ್ರಶ್ನಿಸಿದೆ. ಕೇಂದ್ರ ಬೇಹುಗಾರಿಕಾ ಸಂಸ್ಥೆಯಿಂದ ಬಂದ ಮಾಹಿತಿ ಪ್ರಕಾರ ತಾರಾ ಈ ಯುವಕರ ಜೊತೆ ಸಂಪರ್ಕದಲ್ಲಿದ್ದು ಅವರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಉದ್ಯೋಗ ನೀಡುವ ಭರವಸೆಯ ಮೇಲೆ ಥೈಲ್ಯಾಂಡ್ ಗೆ ಆಹ್ವಾನಿಸಿದ್ದ.

ತಾರಾ ನ ಬಳಿ ಈ ಯುವಕರ ಮಾಹಿತಿಯಿದ್ದರೂ, ಆ ಯುವಕರಿಗೆ ತಾರಾ ನ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ ಪೊಲೀಸರು. ತಾರಾ ಮತ್ತು ಇತರ ಉಗ್ರಗಾಮಿಗಳು ಪಂಜಾಬಿನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಂಚು ಹೂಡಿದ್ದರು ಎಂದು ಕೂಡ ತಿಳಿದುಬಂದಿದೆ.

ಖಾಲಿಸ್ತಾನ್ ವಿಮೋಚನಾ ಸಂಘ ದ ಅಧ್ಯಕ್ಷ ಹರ್ಮಿಂದರ್ ಸಿಂಗ್ ಅಲಿಯಾ ಮಿಂಟೋ ಮತ್ತು ಅವನ ಸಹಚರ ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಅವರನ್ನು ಕೂಡ ಥೈಲಾಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಇವರ ವಿಚಾರಣಾ ವೇಳೆಯಲ್ಲಿ ಕೂಡ ಪಂಜಾಬಿನ ಯುವಕರನ್ನು ಸೆಳೆಯಲು ಯತ್ನಿಸುತ್ತಿದ್ದ ಐ ಎಸ್ ಐ ಯೋಜನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com