
ಬೆಂಗಳೂರು: ಡೀಸೆಲ್ ಬೆಲೆ ತೀವ್ರ ಇಳಿಮುಖ ಕಂಡಿದ್ದರೂ, ೨೦೧೫-೧೬ ರ ರೈಲ್ವೆ ಬಜೆಟ್ ನಲ್ಲಿ, ರೈಲು ಪ್ರಯಾಣದ ಟಿಕೆಟ್ ದರ ಕಡಿತಗೊಳ್ಳುವ ಸಾಧ್ಯತೆ ಕಡಿಮೆ ಎಂದು ಗುರುವಾರ ರೈಲ್ವೆ ಸಚಿವ ಸುರೇಶ್ ಪ್ರಭು ಸುಳಿವು ನೀಡಿದ್ದಾರೆ.
"ರೈಲ್ವೆ ಪ್ರಯಾಣ ದರದಲ್ಲಿ ನಮಗೆ ಸಿಗುವುದು ಬರಿ ೫೦%. ಅದರಲ್ಲಿ ಈಗಾಗಲೇ ಸಬ್ಸಿಡಿ ನೀಡಲಾಗಿದೆ ಮತ್ತು ಪ್ರಯಾಣಿಕರು ಈ ಸಬ್ಸಿಡಿಯಿಂದ ಈಗಾಗಲೇ ಸಹಾಯ ಪಡೆದಿದ್ದಾರೆ" ಎಂದು ರೈಲ್ವೆ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಪ್ರಭು ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮುಂದಿನ ತಿಂಗಳು ಮಂಡಿಸಲಿದ್ದಾರೆ.
ಕಳೆದ ವರ್ಷದ ಜೂನ್ ನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಸುಮಾರು ೫೦% ಇಳಿಮುಖ ಕಂಡಿದ್ದು, ಭಾರತ ಸರ್ಕಾರದ ಇಂಧನ ಮಾರುಕಟ್ಟೆ ಸಂಸ್ಥೆಗಳು ಕೂಡ ಡೀಸೆಲ್ ದರವನ್ನು ಅಕ್ಟೋಬರ್ ನಿಂದ ಹಲವಾರು ಬಾರಿ ಕಡಿತಗೊಳಿಸಿದ ಪರಿಣಾಮ, ೧೦ ರಿಂದ ೧೧ ರೂ ಕಡಿಮೆಯಾಗಿದೆ. ಇದು ರೈಲ್ವೆ ಇಲಾಖೆಗೆ ಕೂಡ ಆರ್ಥಿಕವಾಗಿ ಹೆಚ್ಚು ಸಹಾಯವಾಗಿದೆ.
Advertisement