
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಕಿರಣ್ ಬೇಡಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಆಪ್ ವಿರುದ್ಧ ಟ್ವೀಟ್ ದಾಳಿ ಮಾಡಿದ ಬೇಡಿ, ಸ್ವತಃ ಲಿಂಗ ತಾರತಮ್ಯ ತೋರಿಸುವ ಆಮ್ ಆದ್ಮಿ ಪಕ್ಷದಿಂದ ಮಹಿಳೆಯರು ಏನು ಬಯಸಬೇಕು? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಆಪ್ ನಾಯಕ ಕುಮಾರ್ ವಿಶ್ವಾಸ್ ರ್ಯಾಲಿಯೊಂದರಲ್ಲಿ ಮಹಿಳೆಯರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದರು. ವಾರಗಳ ಹಿಂದೆಯಷ್ಟೇ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ತಮ್ಮ ಅನುಮತಿಯಿಲ್ಲದೆಯೇ ಆಪ್ ಪೋಸ್ಟರ್‌ನಲ್ಲಿ ಫೋಟೋ ಬಳಸಿಕೊಂಡಿದ್ದಕ್ಕಾಗಿ ಕಿರಣ್ ಬೇಡಿ ಕೇಜ್ರಿವಾಲ್ ವಿರುದ್ಧ ನೋಟಿಸ್ ಕಳುಹಿಸಿದ್ದರು.
ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾವುದು? ಎಂದು ಕೇಳುವ ಆಪ್ ಪೋಸ್ಟರ್‌ನಲ್ಲಿ ಕೇಜ್ರಿವಾಲ್ ಮತ್ತು ಕಿರಣ್ ಬೇಡಿಯ ಫೋಟೋ ಪ್ರಕಟಿಸಿ ಆಪ್ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು.
ಇದಕ್ಕಿಂತ ಮುನ್ನ ಆಪ್ ಇದೇ ಪ್ರಶ್ನೆಯನ್ನಿಟ್ಟುಕೊಂಡು ಬಿಜೆಪಿ ನಾಯಕ ಜಗದೀಶ್ ಮೂಖಿ ಅವರ ಫೋಟೋವನ್ನು ಪ್ರಕಟಿಸಿತ್ತು.
Advertisement