ನರೇಶ್ ಬಲ್ಯಾಣ್
ಪ್ರಧಾನ ಸುದ್ದಿ
ಆಪ್ ಅಭ್ಯರ್ಥಿ ನಿವಾಸದ ಮೇಲೆ ಚು.ಆಯೋಗ ದಾಳಿ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್ ಬಲ್ಯಾಣ್ ಅವರ ನಿವಾಸದ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು...
ನವದೆಹಲಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್ ಬಲ್ಯಾಣ್ ಅವರ ನಿವಾಸದ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಅಧಿಕಾರಿಗಳು 5000 ಬಾಟಲ್ ಮದ್ಯ ವಶಪಡಿಸಿದ್ದು, ಬಲ್ಯಾಣ್ ನಡವಳಿಕೆಯ ನಿಯಮಾವಳಿ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆಪ್ ಸದಸ್ಯರಾದ ಬಲ್ಯಾಣ್ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ್ ನಗರದಿಂದ ಸ್ಪರ್ಧಿಸಲಿದ್ದಾರೆ.
ಆದರೆ ತನ್ನ ಮನೆಯಿಂದ ವಶ ಪಡಿಸಿಕೊಂಡ ಮದ್ಯ ನನಗೆ ಸೇರಿದ್ದಲ್ಲ, ಅದು ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಸೇರಿದ್ದು ಎಂದು ಬಲ್ಯಾಣ್ ವಾದಿಸಿದ್ದಾರೆ.

