ಜನನ ನಿಯಂತ್ರಣ ಮಾತ್ರೆಯ ಜನಕ ಕಾರ್ಲ್ ಜೆರಾಸ್ಸಿ ನಿಧನ

ರಸಾಯನ ಶಾಸ್ತ್ರಜ್ಞ ಜನನ ನಿಯಂತ್ರಣ ಮಾತ್ರೆಯ ಜನಕನೆಂದೇ ಖ್ಯಾತಿ ಪಡೆದಿರುವ ಕಾರ್ಲ್ ಜೆರಾಸ್ಸಿ ...
ಕಾರ್ಲ್ ಜೆರಾಸ್ಸಿ
ಕಾರ್ಲ್ ಜೆರಾಸ್ಸಿ

ಸ್ಯಾನ್ ಫ್ರಾನ್ಸಿಸ್ಕೋ: ರಸಾಯನ ಶಾಸ್ತ್ರಜ್ಞ ಜನನ ನಿಯಂತ್ರಣ ಮಾತ್ರೆಯ ಜನಕನೆಂದೇ ಖ್ಯಾತಿ ಪಡೆದಿರುವ ಕಾರ್ಲ್ ಜೆರಾಸ್ಸಿ ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್ ಪೀಡಿತರಾಗಿದ್ದ ಕಾರ್ಲ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸ್ಟಾನ್ಫೋರ್ಡ್ ಯುನಿವರ್ಸಿಟಿ ವಕ್ತಾರ ಡಾನ್ ಸ್ಟೋಬರ್ ಹೇಳಿದ್ದಾರೆ.

ಸ್ಟಾನ್ಫೋರ್ಡ್ನಲ್ಲಿ ರಸಾಯನ ಶಾಸ್ತ್ರ ಪ್ರೊಫೆಸರ್ ಆಗಿದ್ದ ಕಾರ್ಲ್  1951ರಲ್ಲಿ ನೋರೆಥಿಂಜ್ರೋನ್ (ಜನನ ನಿಯಂತ್ರಣ ಮಾತ್ರೆಯ ಪ್ರಧಾನ ಮೂಲವಸ್ತು) ಸಂಶೋಧನೆ ಮಾಡಿದ ಮೆಕ್ಸಿಕೋ ಟೀಂನಲ್ಲಿ ಸಂಶೋಧಕರಾಗಿದ್ದರು.

ತನ್ನ ಈ ಒಂದು ಸಂಶೋಧನೆಯು ಹೇಗೆ ತನ್ನ ಬದುಕಿನ ದಿಶೆಯನ್ನೇ ಬದಲಾಯಿಸಿತು ಎಂಬುದರ ಬಗ್ಗೆ ಕಾರ್ಲ್ ದಿಸ್ ಮ್ಯಾನ್ಸ್ ಪಿಲ್ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com