
ಜಮ್ಮು: ಸುಮಾರು ೨೦೦೦ ಯಾತ್ರಿಕರ ಮತ್ತೊಂದು ತಂಡ ಹಿಮಾಲಯ ಶಿವ ಗುಹಾ ದೇವಾಲಯಕ್ಕೆ ಶನಿವಾರ ಜಮ್ಮುವಿನಿಂದ ಹೊರಟಿದೆ.
"೪೦೬ ಮಹಿಳೆಯರು, ೨೫ ಮಕ್ಕಳನ್ನು ಒಳಗೊಂಡ ೧೮೪೯ ಭಕ್ತಾದಿಗಳ ಮೂರನೆ ತಂಡ ಅಮರನಾಥ ಯಾತ್ರೆಗೆ ವಾಹನಗಳ ಮೂಲಕ ಜಮ್ಮುವಿನಿಂದ ಹೊರಟಿತು" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿಯವರೆಗೂ ೧೬೦೦೦ ಭಕ್ತಾದಿಗಳು ಅಮರನಾಥ ಗುಹಾ ದೇವಾಲಯದ ಹಿಮಲಿಂಗವನ್ನು ದರ್ಶನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಮರನಾಥ ದೇವಾಲಯ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂದ ೧೪೫೦೦ ಅಡಿ ಮೇಲಿದೆ.
ಆಗಸ್ಟ್ ೨೯ ರಂದು ಶ್ರಾವಣ ಪೂರ್ಣಿಮ ದಿನ ಅಮರನಾಥ ಯಾತ್ರೆಗೆ ತೆರೆ ಬೀಳಲಿದೆ.
Advertisement