ಭಟ್ಕಳ್ ನ ಜೈಲಿನಿಂದ ಹೊರಬರುವ ಯೋಜನೆ ಬೂಟಾಟಿಕೆ: ಪೊಲೀಸರು

ಮುಸ್ಲಿಂ ರಾಷ್ಟ್ರಗಳ ನೆರವಿನಿಂದ ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಿಂದ ಭಯೋತ್ಪಾದಕ ಯಾಸಿನ್ ಭಟ್ಕಳ್ ತಪ್ಪಿಸಿಕೊಂಡು ಹೋಗಲು ಯೋಜನೆ ಹಾಕಿಕೊಂಡಿದ್ದಾನೆ...
ಯಾಸಿನ್ ಭಟ್ಕಳ್
ಯಾಸಿನ್ ಭಟ್ಕಳ್

ಹೈದರಾಬಾದ್:ಮುಸ್ಲಿಂ ರಾಷ್ಟ್ರಗಳ ನೆರವಿನಿಂದ  ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಿಂದ ಭಯೋತ್ಪಾದಕ ಯಾಸಿನ್ ಭಟ್ಕಳ್ ತಪ್ಪಿಸಿಕೊಂಡು ಹೋಗಲು ಯೋಜನೆ ಹಾಕಿಕೊಂಡಿದ್ದಾನೆ ಎಂಬುದು ಜೈಲಿನ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಸೂಚನೆಯಷ್ಟೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಯಾಸಿನ್ 27 ಬಾರಿ ತನ್ನ ಕುಟುಂಬದವರ ಜೊತೆ ಮಾತನಾಡಿದ್ದರೂ ಆ ವೇಳೆಯಲ್ಲಿ ಡಮಾಸ್ಕಸ್ ಅಥವಾ ಇಸ್ಲಾಮಿಕ್ ರಾಜ್ಯಗಳನ್ನು ಎಲ್ಲಿಯೂ ಹೆಸರಿಸಿಲ್ಲ. ಅವನು ತನ್ನ ಪತ್ನಿ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ''ಡಮಾಸ್ಕಸ್ ನಲ್ಲಿರುವ ಯಾವುದೋ ಸ್ನೇಹಿತರ ನೆರವಿನೊಂದಿಗೆ ಸದ್ಯದಲ್ಲಿಯೇ ಜೈಲಿನಿಂದ ಹೊರಬರುತ್ತೇನೆ'' ಎಂಬುದನ್ನು ಹೇಳಿದ್ದ. ಅದು ಭಯೋತ್ಪಾದಕರ ಕೋಡ್ ಶಬ್ದ ಆಗಿರಲಿಕ್ಕೂ ಸಾಕು.ಒಟ್ಟಿನಲ್ಲಿ ಇದು ತನಿಖೆಯ ದಾರಿ ತಪ್ಪಿಸುವ ಕ್ರಮ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಭಟ್ಕಳ್ ನ ಮಾತುಗಳ ವಿಡಿಯೋ ರೆಕಾರ್ಡನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿರುವ ದೂರವಾಣಿಯಿಂದ ಕೈದಿಗಳಿಗೆ ವಾರಕ್ಕೊಮ್ಮೆ 5 ನಿಮಿಷ ಮಾತನಾಡಲು ಅವಕಾಶ ಕಲ್ಪಿಸುತ್ತೇವೆ. ಭಟ್ಕಳ್ ಅರೇಬಿಕ್ ಮತ್ತು ಉರ್ದು ಭಾಷೆಗಳಲ್ಲಿ ತನ್ನ ಕುಟುಂಬದವರ ಜೊತೆ ಮಾತನಾಡುತ್ತಿದ್ದ. ಆತ 27 ಬಾರಿ ಮಾತನಾಡುವಾಗಲೂ ಡಮಾಸ್ಕಸ್ ಅಥವಾ ಇಸ್ಲಾಮಿಕ್ ರಾಜ್ಯಗಳ ಪ್ರಸ್ತಾಪ ಮಾಡಿರಲಿಲ್ಲ. ಬೇರಾವುದೇ ಉಗ್ರಗಾಮಿ ಸಂಘಟನೆಗಳು ಸಹ ಜೈಲಿನ ಭದ್ರತೆಯನ್ನು ಉಲ್ಲಂಘಿಸಿ ಭಟ್ಕಳ್ ನನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿಲ್ಲ ಎಂದು ಜೈಲಿನ ಡಿಐಜಿ ಎ.ನರಸಿಂಹ ತಿಳಿಸಿದ್ದಾರೆ.

ಕಳೆದ ತಿಂಗಳು ಜಾಗೃತ ದಳ ಭಟ್ಕಳ್ ಪತ್ನಿಗೆ ಕರೆ ಮಾಡಿ ಡಮಾಸ್ಕಸ್ ಹೆಸರು ಹೇಳಿರುವುದನ್ನು ಪತ್ತೆಹಚ್ಚಿತ್ತು. ಪ್ರತಿ 14 ದಿನಗಳಿಗೊಮ್ಮೆ ಅವನನ್ನು ಕೋರ್ಟ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಆತ ನ್ಯಾಯಾಲಯಕ್ಕೆ ಹೋಗುವಾಗ ಮತ್ತು ಹಿಂತಿರುಗುವಾಗ ಯಾರ ಜೊತೆ ಮಾತನಾಡುತ್ತಾನೆ, ಏನು ಮಾಡುತ್ತಾನೆ ಎಂಬುದು ನಮಗೆ ತಿಳಿಯುವುದಿಲ್ಲ ಎಂದು ನರಸಿಂಹ ಹೇಳಿದ್ದಾರೆ.

ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂದು ತಿಳಿದಿರುವುದರಿಂದ ತನಿಖೆಗೆ ಅಡ್ಡಿಪಡಿಸಲು ಭಟ್ಕಳ್ ಹೀಗೆ ಮಾಡಿರಬಹುದು ಎಂದು ತೆಲಂಗಾಣ ಜೈಲಿನ ಮಹಾ ನಿರ್ದೇಶಕ ವಿ.ಕೆ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಪಿತೂರಿ:ರಾಷ್ಟ್ರೀಯ ತನಿಖಾ ಸಂಸ್ಥೆ 2013ರಲ್ಲಿ ಯಾಸಿನ್ ಭಟ್ಕಳ್ ನನ್ನು ಬಿಹಾರದಲ್ಲಿ ಬಂಧಿಸಲಾಗಿತ್ತು. ಹೈದರಾಬಾದಿನ ದಿಲ್ ಸುಕ್ ನಗರ್ ಅವಳಿ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಹೈದರಾಬಾದಿಗೆ ಕರೆತರಲಾಗಿತ್ತು. ಈ ದಾಳಿಯಲ್ಲಿ 17 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com