ವ್ಯಾಪಂ ಹಗರಣ ತನಿಖೆ ಸೀಮಿತ, ಪ್ರಮುಖ ಆಯಾಮಗಳ ಕಡೆಗಣನೆ: ಕಾರ್ಯಕರ್ತ
ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧ ಪಟ್ಟಂತೆ, ವ್ಯಾಪಂ ಮೂಲಕ ನೇಮಕವಾಗಿದ್ದ ತರಬೇತಿ ಪಡೆಯುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಾಮಿಕಾ ಕುಶ್ವಾಹ ನೆನ್ನೆ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ, ಆ ಹಗರಣ ಬಯಲಿಗೆಳೆಯಲು ಕಾರಣರಾದ ಸಾಮಾಜಿಕ ಕಾರ್ಯಕರ್ತನೊಬ್ಬ ಭಾರತದ ಅತಿ ದೊಡ್ಡ ನೇಮಕಾತಿ ಹಗರಣದಲ್ಲಿ ಕನಿಷ್ಠ ೩೦೦೦೦ ಜನ ಭಾಗಿಯಾಗಿದ್ದು, ೨೦೦೦೦ಕೋಟಿಗೂ ಹೆಚ್ಚು ಮೊತ್ತದ ಹಗರಣ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ರತ್ಲಂ ನಿಂದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಕಾರ್ಯಕರ್ತ ಪರಸ್ ಸಕ್ಲೇಚ ಕಳೆದ ಮೂರು ವರ್ಷಗಳಲ್ಲಿ ನಡೆದ ನೇಮಕಾತಿ ಪರೀಕ್ಷೆಗಳಲ್ಲಿ ಭಾಗವಿಸಿದ ಸುಮಾರು ೪೬.೩ ಲಕ್ಷ ಜನ ಪರಿವೀಕ್ಷಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ವಿಶೇಷ ತನಿಖಾ ದಳ ಕೆಲವ ಸೀಮಿತ ಪಟ್ಟಿಯನ್ನಷ್ಟೇ ತನಿಖೆ ನಡೆಸುತ್ತಿದೆ. ಸರ್ಕಾರಿ ಇಲಾಖೆಗಳಿಗೆ ನಡೆದ ನೇಮಕಾತಿ ಹಗರಣ ಪ್ರೀ ಮೆಡಿಕ ಟೆಸ್ಟ್(ಪಿ ಎಂ ಟಿ) ಹಗರಣಕ್ಕಿಂತ ದೊಡ್ಡದಿದ್ದು, ಪಿ ಎಂ ಟಿಯನ್ನಷ್ಟೇ ದೊಡ್ದದಾಗಿ ಬಿಂಬಿಸಲಾಗುತ್ತಿದೆ. ದುಡ್ಡಿಗಾಗಿ ನೌಕರಿ ನೀಡಿದ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ರಕ್ಷಿಸಲು ಹೀಗೆ ಮಾಡಲಾಗುತ್ತಿದೆ ಎಂದಿದ್ದಾರೆ.
"೨೦೧೨-೨೧೦೪ ರವರೆಗೆ ೪೦ ಇಲಾಖೆಗಳಿಗೆ ನೇಮಕಾತಿ ನಡೆದಿತ್ತು. ಆದರೆ ಈಗ ತನಿಖೆ ನಡೆಸುತ್ತಿರುವುದು ಕೇವಲ ೮ ಇಲಾಖೆಗಳ ಮೇಲಷ್ಟೇ. ಅಲ್ಲದೆ ವಜಾಗೊಂಡಿರುವ ನೌಕರರು ಮತ್ತು ನೇಮಕಗೊಂಡ ಅಭ್ಯರ್ಥಿಗಳನ್ನಷ್ಟೇ ವಿಚಾರಣೆ ಮಾಡುತ್ತಿರುವುದು. ಹಿರಿಯ ಅಧಿಕಾರಿಗಳನ್ನು ಇನ್ನೂ ಪ್ರಶ್ನಿಸಿಲ್ಲ" ಎಂದಿರುವ ಸಕ್ಲೇಚ ಸರ್ಕಾರ ಹಿರಿಯ ಅಧಿಕಾರಿಗಳ ರಕ್ಷಣೆಗೆ ನಿಂತಿದೆ ಎಂದು ದೂರಿದ್ದಾರೆ.
ವಿಶೇಶ ತನಿಖಾ ಪಡೆಗೆ ದಾಖಲೆಗಳನ್ನು ಒದಗಿಸಿರುವ ಸಕ್ಲೇಚಾ, ೨೦೦೪ ರಿಂದ ೨೦೧೪ರ ವೇಳೆಯಲ್ಲಿ ರಾಜ್ಯ ಸರ್ಕಾರ ೭೯ ಬಾರಿ ನೇಮಕಾತಿ ನಡೆಸಿರುವುದನು ಬಿಚ್ಚಿಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ