ಪದಚ್ಯುತಿಗಾಗೇ ಲೋಕಾ ಕಾಯ್ದೆ ತಿದ್ದುಪಡಿ: ಸಿಎಂ

ಲೋಕಾಯುಕ್ತರ ಪದಚ್ಯುತಿಗಾಗಿಯೇ ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಲೋಕಾಯುಕ್ತರ ಪದಚ್ಯುತಿಗಾಗಿಯೇ ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಿನಾಮೆ ನೀಡುವಂತೆ ಲೋಕಾಯುಕ್ತರಿಗೆ ಸರ್ಕಾರ ಸೂಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ರಾಜಿನಾಮೆ ಕೊಡುವುದು, ಬಿಡುವುದು ಲೋಕಾಯುಕ್ತರಿಗೆ ಸೇರಿದ್ದು.
ಒಂದು ವೇಳೆ ಸರ್ಕಾರ ರಾಜಿನಾಮೆ ಕೇಳಿದರೂ ಅವರು ಕೊಡಲ್ಲ ಎಂದರೆ ಮುಂದೇನು ಮಾಡುವುದು ಎಂದು ಸಂದಿಗ್ಧ ಸ್ಥಿತಿಯನ್ನು ತೋಡಿಕೊಂಡರು. ಸರ್ಕಾರವು ಕಾನೂನು ಪ್ರಕಾರ ಕೆಲಸ ಮಾಡಬೇಕು. ಲೋಕಾಯುಕ್ತ ಕಾಯ್ದೆಯಲ್ಲಿ ಸರ್ಕಾರವೇ ಸ್ವಯಂ ಪ್ರೇರಿತವಾಗಿ ತನಿಖೆ ಮಾಡಲು, ಅವರ ರಾಜಿನಾಮೆ ಕೇಳಲು ಅವಕಾಶವಿಲ್ಲ. ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರ ಸೀಮಿತವಾಗಿದೆ. ಹೀಗಾಗಿ, ಅದರ ಪ್ರಕಾರ ಸರ್ಕಾರ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾನೂನಿನಲ್ಲಿ ಲೋಕಾಯುಕ್ತರು, ಉಪ ಲೋಕಾಯುಕ್ತರನ್ನು ತೆಗೆದು ಹಾಕುವ ಸಂಬಂಧ ಕೆಲವು ನಿಯಮಗಳಿವೆ. ಆ ಪ್ರಕಾರವೇ ಸರ್ಕಾರ ನಡೆದುಕೊಳ್ಳಬೇಕು. ಪದಚ್ಯುತಿ ಪ್ರಕ್ರಿಯೆಯನ್ನು ಲೋಕಾಯುಕ್ತರ ಕಾಯ್ದೆ ಹಾಗೂ ನ್ಯಾಯಾಧೀಶರ ವಿಚಾರಣಾ ಕಾಯ್ದೆ ಪ್ರಕಾರ ಮಾಡಬೇಕಿದೆ. ಅದರ ಪ್ರಕಾರ ಮಾಡಲು ನಮ್ಮದೇನೂ ವಿರೋಧ ವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಲೋಕಾಯುಕ್ತರು ತಮ್ಮ ಸಂಸ್ಥೆ ಬಗ್ಗೆ ಕೇಳಿಬಂದಿರುವ ಆರೋಪಗಳ ತನಿಖೆಯನ್ನು ಯಾವುದಾದರೂ ಏಜೆನ್ಸಿಗೆ ವಹಿಸುವಂತೆ ಹೇಳಿಲ್ಲ. ಪ್ರತಿಪಕ್ಷದವರು ಪ್ರಚಾರಕ್ಕೆ ಮಾಡುತ್ತಿರುವ ಸುಳ್ಳು ಆರೋಪಗಳಿವು.
ಲೋಕಾಯುಕ್ತರು ಎಸ್‍ಐಟಿ (ವಿಶೇಷ ತನಿಖಾತಂಡ) ಮೂಲಕ ತನಿಖೆ ಮಾಡಿ ಸಲು ಹೇಳಿದ್ದರು. ಅದರಂತೆ ಎಡಿಜಿಪಿ ಕಮಲ್ ಪಂಥ್ ಅವರ ನೇತೃತ್ವದಲ್ಲಿ ಎಸ್‍ಐಟಿ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಲೋಕಾ ಯುಕ್ತರು ಸಿಬಿಐಗೆ ಕೊಡಿ ಎಂದರೂ ನಾವು ಕೊಡಲು ಸಿದಟಛಿ ಎಂದು ಅವರು
ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com