ಹಿಂದಿ ವಿರೋಧಿ ಚಳವಳಿಗೆ ಮತ್ತೆ ಜೀವ ನೀಡುವುದಾಗಿ ವೈಕೋ ಎಚ್ಚರಿಕೆ

ಜುಲೈ ೨೦,೨೨ ಮತ್ತು ೨೪ ರಂದು ಶಿಕ್ಷಣ ಇಲಾಖೆಯಡಿ ಇರುವ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆಯೋಜಿಸಿರುವ ಸಭೆಗಳಲ್ಲಿ ತ್ರಿಭಾಷಾ ಸೂತ್ರವನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಜುಲೈ ೨೦,೨೨ ಮತ್ತು ೨೪ ರಂದು ಶಿಕ್ಷಣ ಇಲಾಖೆಯಡಿ ಇರುವ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆಯೋಜಿಸಿರುವ ಸಭೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಪರಿಚಯಿಸಲು ಇರುವ ಪ್ರಸ್ತಾವನೆಯನ್ನು ಧಿಕ್ಕರಿಸಿರುವ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ  ಹಿಂದಿ ವಿರೋಧಿ ಚಳವಳಿಗೆ ಮತ್ತೆ ಜೀವ ನೀಡುವುದಾಗಿ ಎಚರಿಸಿದ್ದಾರೆ.

ಮಧುರೈ ನಲ್ಲಿ ಜುಲೈ ೨೦, ಕೊಯಂಬತ್ತೂರಿನಲ್ಲಿ ಜುಲೈ ೨೨ ಮತ್ತು ಚೆನ್ನೈನಲ್ಲಿ ಜುಲೈ ೨೪ರಂದು ನಡೆಯಲಿರುವ ಸಭೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಪರಿಚಯಿಸುವ ಹಾಗೂ ಸಂಸ್ಕೃತವನ್ನು ಅಭಿವೃದ್ಧಿಪಡಿಸುವ ಚರ್ಚೆಗಳು ನಡೆಯುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ೯ ಪ್ರಶ್ನೆಗಳ ಪಟ್ಟಿ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

"ತಮಿಳುನಾಡಿನಲ್ಲಿ ಹಿಂದಿ ಕಲಿಯುವವರಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಹಿಂದಿ ಭಾಷೆಯನ್ನೂ ಕಡ್ಡಾಯಗೊಳಿಸುವ ಪ್ರಯತ್ನ ಪ್ರತಿಭಟನೆಗಳಿಗೆ ಮರುಜೀವ ನೀಡಿದಂತೆ. ಒಂದು ಭಾಗದಲ್ಲಿ ಮಾತನಾಡುವ ಭಾಷೆಯನ್ನು ಮತ್ತೊಂದು ಪ್ರದೇಶದಲ್ಲಿ ಹೇರುವ ಪ್ರಯತ್ನವನ್ನು ಒಪ್ಪಲಾಗುವುದಿಲ್ಲ. ಸಂವಿಧಾನದಲ್ಲಿ ಮಾನ್ಯತೆ ಪಡೆದಿರುವ ಎಲ್ಲ ೨೨ ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳೆಂದು ಒಪ್ಪಿಕೊಳ್ಳಬೇಕು" ಎಂದು ವೈಕೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಸಂಸ್ಕೃತವನ್ನು ಕೂಡ ಪರಿಚಯಿಸುವ ಅಂಜೆಡಾ ಒಳಗೊಂಡಿವೆ ಈ ಸಭೆಗಳು. ರಾಜ್ಯದಲ್ಲಿ ದ್ವಿಭಾಷಾ ಸೂತ್ರವನ್ನು ಕೈಬಿಟ್ಟು, ಹಿಂದಿ ಮತ್ತು ಸಂಸ್ಕೃತವನ್ನು ಹೇರುವ ಪಿತೂರಿ ನಡೆಯುತ್ತಿದೆ ಎಂದು ವೈಕೋ ದೂರಿದ್ದಾರೆ.

೧೯೩೭ ಮತ್ತು ೧೯೬೫ ರಲ್ಲಿ ಶಾಲೆಗಳಲ್ಲಿ ಹಿಂದಿ ಕಡ್ಡಾಯಗೊಳಿಸಿದ್ದಕ್ಕೆ ಸ್ವ ಆಹುತಿಗೆ ಒಳಗಾದ ಯುವಕನನ್ನು ನೆನಪಿಸಿಕೊಂಡ ವೈಕೋ ಇಂತಹ ಹಿಂದಿ ವಿರೋಧಿ ಪ್ರತಿಭಟನೆಗಳು ಮರುಕಳಿಸುವ ವಿರುದ್ಧ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com