
ರಾಯಪುರ: ಚತ್ತೀಸ್ ಘರ್ ನಲ್ಲಿ ಭಾರತೀಯ ಮಾವೋವಾದಿ ಬಂಡುಕೋರರು ಅಪಹರಿಸಿದ್ದ ನಾಲ್ಕೂ ಜನ ಪೊಲೀಸರನ್ನು ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ತೀವ್ರ ಮಾವೋವಾದಿ ಚಟುವಟಿಕೆಯುಳ್ಳ ಕುಟ್ರು ಗ್ರಾಮದ ಬಳಿ ಬಸ್ಸಿನಲ್ಲಿ ತೆರಳುತ್ತಿದ್ದ ಭದ್ರತಾ ಪಡೆಯ ವಾಹನವನ್ನು ಗೆರಿಲ್ಲಾಗಳು ಸೋಮವಾರ ರಾತ್ರಿ ತಡೆದು ನಿಲ್ಲಿಸಿದ್ದರು.
"ನಾಲ್ಕು ಜನ ಅಪಹೃತ ಪೋಲಿಸರನ್ನು ಮಾವೋವಾದಿಗಳು ಕೊಂದಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಕಾಡಿನ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಮೃತದೇಹಗಳನ್ನು ಎಸೆಯಲಾಗಿದೆ" ಎಂದು ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಧೃವ್ ತಿಳಿಸಿದ್ದಾರೆ.
"ಈ ಕೃತ್ಯಕ್ಕೆ ಕಾರಣರಾದವರನ್ನು ಪೊಲೀಸರು ಕಾಡಿನಲ್ಲಿ ಹುಡುಕುತ್ತಿದ್ದಾರೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಪೊಲೀಸರನ್ನು ಅಪಹರಿಸಿದ ಸ್ಥಳದ ಸಮೀಪದಲ್ಲೇ ಮೃತ ದೇಹಗಳು ಕೂಡ ಪತ್ತೆಯಾಗಿವೆ. ಆದುದರಿಂದ ಅಪಹರಣ ಆದ ಕೂಡಲೇ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ವಾದ ಸಂದೇಹಾಸ್ಪದವಾಗಿ ಕಂಡುಬಂದಿದೆ.
ಬಡ ಬುಡಕಟ್ಟು ಅಲ್ಪಸಂಖ್ಯಾತರು ಮತ್ತು ರೈತರ ಪರವಾಗಿ ನಾವು ಹೋರಾಡುತ್ತಿದೇವೆ ಎಂದು ಹೇಳಿಕೊಳ್ಳುವ ಮಾವೋವಾದಿಗಳು ಕೇಂದ್ರ ಮತ್ತು ಪೂರ್ವ ಭಾರತೀಯ ರಾಜ್ಯಗಳಲ್ಲಿ ಸರ್ಕಾರವನ್ನು ಹೊರದಬ್ಬಲು ಹಿಂಸಾತ್ಮಕ ಹೋರಾಟ ನಡೆಸಿವೆ.
ಮಾವೋವಾದಿ ಬಂಡುಕೋರರು ದೇಶದ ಆಂತರಿಕ ಭದ್ರತೆಗೆ ಗಂಬೀರವಾದ ಸವಾಲು ಎನ್ನುತ್ತದೆ ಸರ್ಕಾರ.
Advertisement