
ಮುಜಪ್ಫರ್ ನಗರ: ಬರಲಿರುವ ಈದ್ ಸಂಭ್ರಮ ಮತ್ತು ಕವಾಡ್ ಯಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಜಪ್ಫರ್ ನಗರ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸಿ ಆರ್ ಪಿ ಸಿ ೧೪೪ರಡಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಮಂದಿ ಒಗ್ಗೂಡುವುದು, ಶಸ್ತ್ರಾಸ್ತ್ರ-ಬಂದೂಕುಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೊಂಡೊಯ್ಯುವುದು, ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮೆಜೆಸ್ಟ್ರೆಟ್ ಇಂದರಮಾಣಿ ತ್ರಿಪಾಠಿ ಇಂದು ತಿಳಿಸಿದ್ದಾರೆ.
ಕವಾಡ್ ಯಾತ್ರೆ ಆಗಸ್ಟ್ ೧ ರಿಂದ ಪ್ರಾರಂಭವಾಗಲಿದೆ ಮಾತು ನಿಷೇಧಾಜ್ಞೆ ಸೆಪ್ಟಂಬರ್ ೧೩ರವರೆಗೆ ಮುಂದುವರೆಯಲಿದೆ.
Advertisement