ಈಗಲಾದರೂ ಕಣ್ತೆರೆದು ನೋಡಿ: ಲೋಕಾ ವಿರುದ್ಧ ಕಿಡಿಕಾರಿದ ಹೈಕೋರ್ಟ್

ಲೋಕಾಯುಕ್ತ ಸಂಸ್ಥೆಯಲ್ಲಿ ಒಳಒಪ್ಪಂದ ವ್ಯವಹಾರಗಳು ನಡೆಯುತ್ತಿದ್ದು, ಸಂಸ್ಥೆಯಲ್ಲಿನ ಲೋಪಗಳು ಬೆಳಕಿಗೆ ಬಂದಿವೆ. ಈಗಲಾದರೂ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಒಳಒಪ್ಪಂದ ವ್ಯವಹಾರಗಳು ನಡೆಯುತ್ತಿದ್ದು, ಸಂಸ್ಥೆಯಲ್ಲಿನ ಲೋಪಗಳು ಬೆಳಕಿಗೆ ಬಂದಿವೆ. ಈಗಲಾದರೂ ಸಂಸ್ಥೆ ಕಣ್ಣು ತೆರೆಯದಿದ್ದರೆ ಹೇಗೆ ಎಂದು ಸಂಸ್ಥೆ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ 18 ತಿಂಗಳಾದರೂ ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ವಿ.ಎಲ್. ನಂದೀಶ್ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ಈ ಕುರಿತು ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ, ಲೋಕಾಯುಕ್ತ ಸಂಸ್ಥೆಯಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಅದನ್ನೇ ಸಮಾಜ ಕೂಡ ಬಯಸುತ್ತದೆ. ಈ ಕಾರಣಕ್ಕಾಗಿ ಮೊದಲು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿರುವಂತೆ ಬದಟಛಿತೆಯನ್ನು ಲೋಕಾ ಸಂಸ್ಥೆ ಪ್ರದರ್ಶಿಸಬೇಕು ಎಂದು ಹೈಕೋರ್ಟ್ `ಲೋಕ'ಕ್ಕೇ ಬೋಧನೆ ಮಾಡಿದೆ.
ಹೈಕೋರ್ಟ್ ಹೇಳಿದ್ದು...

  • ಪ್ರಕರಣ ದಾಖಲಾಗಿ ವರ್ಷಗಳೇ ಕಳೆದು ತನಿಖೆ ಏಕೆ ಪೂರ್ಣಗೊಳ್ಳುತ್ತಿಲ್ಲ.
  • ತನಿಖೆ ವಿಳಂಬಕ್ಕೆ ಕಾರಣವೇನು ಎಂಬುದನ್ನಾದರೂ ಕೋರ್ಟ್‍ಗೆ ತಿಳಿಸಿ
  • ವಿಳಂಬ ಧೋರಣೆಯಿಂದ ಸಾಕ್ಷ್ಯಾಧಾರ ನಾಶವಾಗುವುದಿಲ್ಲವೇ?
  • ವಿಚಾರಣೆ ಹಂತದಲ್ಲಿ ಸಾಕ್ಷ್ಯಗಳು ನಿಮಗೆ ಪೂರಕವಾಗಿ ಸ್ಪಂದಿಸುತ್ತಾರೆಯೇ?
  • ನಿಮ್ಮ ಕೆಲಸ ಇದೇ ರೀತಿಯಾದರೆ ತಪ್ಪಿತಸ್ಥರ ದಾಳಿ ಹೇಗೆ?
  • `ಸ್ವಾಮಿ, ಸಂಸ್ಥೆ ಯಾವ ರೀತಿ ಕಾರ್ಯನಿರ್ವಹಿಸಬೇಕು?
  • ಎಷ್ಟು ತಿಂಗಳ ಒಳಗಾಗಿ ಪ್ರಕರಣಗಳು ಇತ್ಯರ್ಥಪಡಿಸಬೇಕು?
  • ಈ ಬಗ್ಗೆ ನ್ಯಾಯಪೀಠವೇ ಒಂದು ನಿರ್ದೇಶನ ನೀಡಲಿ.
  • ಪೀಠ ನೀಡುವ ನಿರ್ದೇಶನಕ್ಕೆ ಸಂಸ್ಥೆ ಬದ್ಧವಾಗಿರುತ್ತದೆ'
ಕೋರ್ಟ್ ತರಾಟೆ:
ಅಕ್ರಮ-ಸಕ್ರಮ:
ಆದೇಶ:
ಸಿಹಿ ಉಂಡವ ಸುಮ್ಮನಿರ್ತಾನಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com