ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಮುಂಬೈ ಮೇಯರ್

ಮುಂಬೈ ಮೇಯರ್ ಮತ್ತು ಶಿವಸೇನಾ ನಾಯಕಿ ಸ್ನೇಹಾಲ್ ಅಂಬೇಕಾರ್ ಅವರು ಪ್ರಧಾನಿ ಮೋದಿಯವರನ್ನು ಮೃತ ನಾಜಿ ನಾಯಕ, ವಿವಾದಾತ್ಮಕ ಸರ್ವಾಧಿಕಾರಿ
ವಿವಾದಾತ್ಮಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಪ್ರಧಾನಿ ನರೇಂದ್ರ ಮೋದಿ
ವಿವಾದಾತ್ಮಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಪ್ರಧಾನಿ ನರೇಂದ್ರ ಮೋದಿ

ಮುಂಬೈ: ಮುಂಬೈ ಮೇಯರ್ ಮತ್ತು ಶಿವಸೇನಾ ನಾಯಕಿ ಸ್ನೇಹಾಲ್ ಅಂಬೇಕಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮೃತ ನಾಜಿ ನಾಯಕ, ವಿವಾದಾತ್ಮಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರಿಗೆ ಹೋಲಿಸಿದ್ದಾರೆ.

ಮೇಯರ್ ನೀಡಿರುವ ಸಂದರ್ಶನವೊಂದರಲ್ಲಿ ಮೋದಿ ಅವರ ಆಡಳಿತ ಹಿಟ್ಲರ್ ಆಳ್ವಿಕೆಯಿದ್ದಂತೆ ಎಂದಿರುವ ಅವರು "ನಾನು ನರೇಂದ್ರ ಮೋದಿಯವರನ್ನು ಪ್ರಶಂಸಿಸುತ್ತೇನೆ ಆದರೆ ಒಂದು ಹಂತದಲ್ಲಿ ಅವರ ಆಡಳಿತ ಹಿಟ್ಲರ್ನಂತೆ..."

"ಅಧಿಕಾರ ಒಬ್ಬನೇ ಮನುಷ್ಯನ ಸ್ವತ್ತಾದಾಗ ಹೀಗಾಗುವುದು ಸಹಜ" ಎಂದು ಮೊದಲ ಬಾರಿ ನಗರಪಾಲಿಕೆ ಕಾರ್ಪೊರೇಟರ್ ಆಗಿರುವ ಅಂಬೇಕಾರ್ ತಿಳಿಸಿದ್ದಾರೆ.

ಸೆಪ್ಟಂಬರ್ ೨೦೧೪ರಲ್ಲಿ ನಗರದ ಏಳನೇ ಮಹಿಳಾ ಹಾಗು ಮೊದಲ ದಲಿತ ಮೇಯರ್ ಆಗಿ ಆಯ್ಕೆಯಾಗಿರುವ ಅಂಬೇಕಾರ್ ಅವರು ತಮ್ಮ ವಾಹನಕ್ಕೆ ಕೆಂಪು ಬತ್ತಿ ಬೇಕೆಂದು ಹೇಳಿ ಗಮನ ಸೆಳೆದಿದ್ದರು.

ಈಗ ಈ ಮಾಜಿ ಎಲ್ ಐ ಸಿ ಅಧಿಕಾರಿ ತಮ್ಮ ಸ್ಥಾನ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸಮ ಎಂದಿದ್ದಾರೆ.

"ಮೇಯರ್ ಅವರಿಗೆ ತುರ್ತು ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ, ಅಲ್ಲದೆ ಗಣ್ಯರ ಸ್ವೀಕಾರಕ್ಕೆ ಆಗಾಗ ತೆರಳಬೇಕಾಗುತ್ತದೆ. ಮುಖ್ಯಮಂತ್ರಿಗಳ ಕಾರಿಗೆ ಕೆಂಪು ಬತ್ತಿಯಿದೆ. ನಗರದಲ್ಲಿ ಮೇಯರ್ ಸ್ಥಾನ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸಮ" ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com