ಮುಂದುವರಿದ ವಿರೋಧ ಪಕ್ಷಗಳ ಗದ್ದಲ: ಲೋಕಸಭಾ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಸಂಸತ್ ನ ಮುಂಗಾರು ಅಧಿವೇಶನ ಪ್ರಾರಂಭವಾದ 4 ನೇ ದಿನವೂ ಲೋಕಸಭಾ ಕಲಾಪ ವ್ಯರ್ಥವಾಗಿದೆ.
ಸಂಸತ್ ಅಧಿವೇಶನ(ಪಿಟಿಐ ಚಿತ್ರ)
ಸಂಸತ್ ಅಧಿವೇಶನ(ಪಿಟಿಐ ಚಿತ್ರ)

ನವದೆಹಲಿ: ಸಂಸತ್ ನ ಮುಂಗಾರು ಅಧಿವೇಶನದ 4 ನೇ ದಿನವೂ ಲೋಕಸಭಾ ಕಲಾಪ ವ್ಯರ್ಥವಾಗಿದ್ದು, ಪ್ರತಿಪಕ್ಷಗಳ ಗದ್ದಲ ತೀವ್ರಗೊಂಡಿದ್ದರಿಂದ ಸೋಮವಾರದವರೆಗೆ ಮುಂದೂಡಲಾಗಿದೆ.

ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳ ಗದ್ದಲ ಮುಂದುವರೆದಿದ್ದು ಕಲಾಪವನ್ನು ಮಧ್ಯಾಹ್ನದ  ವರೆಗೆ ಮುಂದೂಡಲಾಗಿದೆ. ವ್ಯಾಪಂ ಹಗರಣ, ಲೈಟ್ ಮೋದಿ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಸಂಸತ್ ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದಾಗಿ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯುಂಟಾಗುತ್ತಿದ್ದು, ನಿರಂತರವಾಗಿ ಮುಂದೂಡಲಾಗುತ್ತಿದೆ.
ಅಧಿವೇಶನದ ಮೂರನೇ ದಿನವಾದ ಜು.23 ರಂದೂ ಸಹ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಠಿಸಿದ್ದರಿಂದ, ಲೋಕಸಭೆ, ರಾಜ್ಯಸಭೆಯ ಕಲಾಪಗಳನ್ನು ಪದೇ ಪದೇ ಮುಂದೂಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com