
ರಾಂಚಿ: ಜಾರ್ಖಂಡದ ಬೋಕೋರಾವ್ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್(ಸಿಸಿಎಲ್) ಗೆ ಸೇರಿದ ೩೦ ವಾಹನಗಳನ್ನು ಮಾವೋವಾದಿಗಳು ಬೆಂಕಿಗೆ ಆಹುತಿಯಾಗಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ರಾಂಚಿಯಿಂದ ೧೩೦ ಕಿಮೀ ದೂರದಲ್ಲಿರುವ ಬರ್ಮೋ ಪ್ರದೇಶದ ಸಿಸಿಎಲ್ ಯೋಜನಾ ಪ್ರದೇಶಕ್ಕೆ ಶುಕ್ರವಾರ ರಾತ್ರಿ ದಾಳಿಮಾಡಿದ ೧೦೦ಕ್ಕೂ ಹೆಚ್ಚು ಜನ ಮಾವೋವಾದಿಗಳು ಈ ಕೃತ್ಯವನ್ನು ಎಸಗಿದ್ದಾರೆ.
ಭದ್ರತಾ ಸಿಬ್ಬಂದಿಗಳಿಗೆ ಥಳಿಸಿ ಅವರನ್ನು ಓಡಿಹೋಗುವಂತೆ ಹೇಳಿ ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ.
ರಾಜ್ಯದ ೨೪ ಜಿಲ್ಲೆಗಳ ೧೮ ಜಿಲ್ಲೆಗಳಲ್ಲಿ ಮಾವೋವಾದಿಗಳ ಚಟುವಟಿಕೆ ತೀವ್ರವಾಗಿದೆ. ಈ ಕೃತ್ಯವೆಸಗಿದ ಮಾವೋವಾದಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
Advertisement