ವಿಧಾನ ಪರಿಷತ್ ಸದಸ್ಯ ಶರವಣ ವಿರುದ್ಧ ಎಸ್‍ಐಟಿಗೆ ದೂರು

ನ್ಯಾ. ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಎಂಬುವರು ದೂರು ನೀಡಿದ್ದಾರೆ...
ವಿಧಾನ ಪರಿಷತ್ ಸದಸ್ಯ ಸರವಣ ವಿರುದ್ಧ ಎಸ್‍ಐಟಿಗೆ ದೂರು (ಸಾಂದರ್ಭಿಕ ಚಿತ್ರ)
ವಿಧಾನ ಪರಿಷತ್ ಸದಸ್ಯ ಸರವಣ ವಿರುದ್ಧ ಎಸ್‍ಐಟಿಗೆ ದೂರು (ಸಾಂದರ್ಭಿಕ ಚಿತ್ರ)

ಬೆಂಗಳೂರು: ನ್ಯಾ. ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಎಂಬುವರು ದೂರು ನೀಡಿದ್ದಾರೆ.

ಅಶ್ವಿನ್‍ರಾವ್‍ನಿಂದ ಹಣಕ್ಕೆ ಡಿಮ್ಯಾಂಡ್ ಮಾಡಿ ಕರೆ ಬಂದಿತ್ತು. ಈ ವಿಚಾರವನ್ನು ನನಗೆ ತಿಳಿಸಿದ್ದರು ಎಂದು ವಿಧಾನಪರಿಷತ್ ನನಗೆ ತಿಳಿಸಿದ್ದರು ಎಂದು ವಿಧಾನಪರಿಷತ್ ನಲ್ಲೇ ಸದಸ್ಯ ಬಸವರಾಜ ಹೊರಟ್ಟಿ ಅವರು ಹೇಳಿಕೆ ನೀಡಿದ್ದರು. ಇದೇ ವೇಳೆ ಸುದ್ದಿವಾಹಿನಿಗಳಿಗೆ ಕೂಡಾ ಸರವಣ ಅವರು ತನ್ನ ಬಳಿ ರು.25 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ನೀಡುವಂತೆ ಅಶ್ವಿನ್‍ರಾವ್ ಕರೆ ಮಾಡಿದ್ದರು ಎಂದು ಸರವಣ ಹೇಳಿಕೆ ನೀಡಿದ್ದರು. ಮೂರು ತಿಂಗಳ ಹಿಂದೆ ಈ ಕರೆ ಬಂದಿತ್ತು ಎಂದು ಸರವಣ ಹೇಳಿದ್ದಾರೆ.

ಆದರೆ, ಮೂರು ತಿಂಗಳ ಹಿಂದೆಯೇಈ ರೀತಿ ಬೆದರಿಕೆ ಬಂದಿದ್ದರೂ ಸರವಣ ಅವರು ಯಾವುದೇ ಪೊಲೀಸರಿಗೆ, ಲೋಕಾಯುಕ್ತ ಅಧಿಕಾರಿಗಳಿಗೆ ಅಥವಾ ಸಭಾಧ್ಯಕ್ಷರಿಗೆ ಮಾಹಿತಿ ನೀಡದೆ ಸುಮ್ಮನೆ ಇದ್ದಿದ್ದು ಏಕೆ? ಎಂದು ರಾಘವೇಂದ್ರ ಎಸ್‍ಐಟಿಗೆ ನೀಡಿರುವ ದೂರಿನಲ್ಲಿ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿ ಲಂಚ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಕಾರಣ ಈ ಬಗ್ಗೆಯೂ ಪರಿಶೀಲನೆ ಮಾಡಬೇಕು. ಸಾರ್ವಜನಿಕ ಜೀವನದಲ್ಲಿರುವ ಸರವಣ ಅವರು ಕೂಡಾ ಯಾವುದಾದರೂ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿ ಮೇಲೆ ಅಶ್ವಿನ್‍ರಾವ್ ಹಣಕ್ಕೆ ಬೇಡಿಕೆ ಇಟ್ಟಿರಬಹುದು ಎಂದು ದೂರಿನಲ್ಲಿ ವಿವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com