
ಸಮಾಜವಾದಿ ಪಕ್ಷದ ಶಾಸಕ ರಾಮಮೂರ್ತಿ ಅವರ ವಿದುದ್ಧ ಸಾಮಾಜಿಕ ಮಾಧ್ಯಮದ ಪತ್ರಕರ್ತ ಜಾಗೇಂದ್ರ ಸಿಂಗ್ ಫೇಸ್ ಬುಕಿನಲ್ಲಿ ಬರೆದ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಶಹಜೆಹನಾಪುರದಲ್ಲಿ ಅವನನ್ನು ಸಜೀವ ದಹನ ಮಾಡಿದ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಶಾಸಕನ ವಿರುದ್ಧ ಫೇಸ್ ಬುಕ್ಕಿನಲ್ಲಿ ಬರೆದದ್ದಲ್ಲದೆ, ದಿನಪತ್ರಿಕೆಯಲ್ಲಿ ಈ ಶಾಸಕದ ಅಕ್ರಮ ಗಣಿಗಾರಿಕೆ ಮತ್ತು ಜಮೀನು ಕಬಳಿಕೆಯ ಬಗ್ಗೆ ಕೂಡ ಬರೆದಿದ್ದ ಎನ್ನಲಾಗಿದೆ.
ಈ ಆರೋಪಗಳು ಶಾಸಕನನ್ನು ಕೆರಳಿಸಿ ಪತ್ರಕರ್ತನ ವಿರುದ್ಧ ಮಿಥ್ಯಾರೋಪಗಳನ್ನು ಸೃಷ್ಟಿಸಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಕುಟುಂಬದವರು ಹೇಳುವ ಪ್ರಕಾರ ಜಾಗೇಂದ್ರ ಅವರನ್ನು ಬಂಧಿಸಲು ಪೊಲೀಸರು ಬಂದರು ಹಾಗೂ ಜಾಗೇಂದ್ರನಿಗೆ ಬೆಂಕಿ ಹಚ್ಚಿದರು. ಆಸ್ಪತ್ರೆಗೆ ಕೊಂಡೊಯ್ಯುವಾಗ ಅವನು ಮೃತಪಟ್ತ ಎಂದು ಆಪಾದಿಸಿದ್ದಾರೆ.
ಇದನ್ನು ಅಲ್ಲಗೆಳೆದಿರುವ ಪೊಲೀಸರು ನಾವು ಅವರನ್ನು ಬಂದಿಸಲು ಹೋಗಿದ್ದಾಗ ಪತ್ರಕರ್ತ ಆತ್ಮಹತ್ಯೆ ಮಾಡಿಕೊಂಡನು ಎಂದಿದ್ದಾರೆ.
Advertisement