
ಚುನಾವಣಾ ಆಯೋಗಕ್ಕೆ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿಸಿ ಒದಗಿಸಿ ಕೇಂದ್ರ ಮಾನವ ಸಂಪನ್ಮೂಲ ಖಾತೆಗಳ ಸಚಿವೆ ಸ್ಮೃತಿ ಇರಾನಿ ವಿವಾದಕ್ಕೊಳಗಾಗಿದ್ದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ಒದಗಿಸಿದ್ದರು. ೧೯೯೫ ರಲ್ಲಿ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಆರ್ಥಶಾಸ್ತ್ರದಲ್ಲಿ ಎಂಫಿಲ್ ಪದವಿ ಪಡೆದಿರುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ಅವರ ವಿಶ್ವವಿದ್ಯಾಲಯ ಪ್ರಮಾಣಪತ್ರವನ್ನು ಗಮನಿಸಿದಾಗ ರಾಹುಲ್ ಗಾಂಧಿ ಅವರು ಪದವಿಯ ವರ್ಷ ಮತ್ತು ಪದವಿಯ ಹೆಸರಿನ ಬಗ್ಗೆಯೂ ತಪ್ಪು ಮಾಹಿತಿ ಒದಗಿಸಿದ್ದು ತಿಳಿದು ಬರುತ್ತದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಪದವಿ ಪಡೆದಿರುವುದಾಗಿ ನಕಲಿ ಪ್ರಮಾಣಪತ್ರ ಸೃಷ್ಟಿಸಿದ್ದರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸೋನಿಯಾ ಗಾಂಧಿ ಅಧ್ಯಯನ ಮಾಡಿಲ್ಲ ಎಂದುದಕ್ಕೆ ನನ್ನ ಬಳಿ ವಿಶ್ವವಿದ್ಯಾಲಯ ಬರೆದಿರುವ ಪತ್ರವಿದೆ ಹಾಗು ಅವರು ೫ ತರಗತಿಗಿಂತಲೂ ಹೆಚ್ಚು ಓದಿಲ್ಲ ಎಂದು ಆಪಾದಿಸಿ ವಕೀಲ ಸುಬ್ರಮಣ್ಯಸ್ವಾಮಿ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದರು.
ಎಎಪಿ ಪಕ್ಷದಲ್ಲಿ ತೋಮರ್ ಅಷ್ಟೇ ಅಲ್ಲ, ಪಕ್ಷದ ಶಾಸಕ ಸುರೇಂದರ್ ಸಿಂಗ್ ಅವರು ಸಿಕ್ಕಿಂ ವಿಶ್ವವಿದ್ಯಾಲಯದಲ್ಲಿ ೨೦೧೨ರಲ್ಲಿ ಬಿ ಎ ಪದವಿ ಪಡೆದಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಆಪಾದಿಸಿ ದೆಹಲಿ ಹೈಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಬಿಜೆಪಿ ಶಾಸಕರೊಬ್ಬರು ಸುರೇಂದರ್ ಸಿಂಗ್ ೨೦೧೧ ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.
ಬಿಹಾರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದ ಎಎಪಿ ಪಕ್ಷದ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ನೆನ್ನೆ ಬಂಧನಕ್ಕೊಳಗಾಗಿದ್ದಾರೆ. ಬಿಹಾರದ ವಿಶ್ವವಿದ್ಯಾಲಯ, ತೋಮರ್ ಅವರು ಯಾವುದೇ ಕಾನೂನು ಪದವಿ ಪಡೆದಿಲ್ಲ ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸದೆ.
Advertisement