ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ದಾಳಿ: 100ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ

ಭಾರತೀಯ ಸೇನೆಯ ವಿಶೇಷ ಕಾರ್ಯಾಚರಣೆ ಪಡೆಗಳು ಭಾರತ-ಮಯನ್ಮಾರ್ ಗಡಿಯಲ್ಲಿ ನಡೆಸಿದ ದಾಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ಸೇನೆಯ ವಿಶೇಷ ಕಾರ್ಯಾಚರಣೆ ಪಡೆಗಳು ಭಾರತ-ಮಯನ್ಮಾರ್ ಗಡಿಯಲ್ಲಿ ನಡೆಸಿದ ದಾಳಿಗೆ ಎರಡು ಎನ್ ಎಸ್ ಸಿ ಎನ್ ಭಯೋತ್ಪಾದಕ ಶಿಬಿರಗಳು ನಾಶಗೊಂಡು 100ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಮಣಿಪುರದ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ದಾರ್ಗಾ ರೆಜಿಮೆಂಟ್ ನ ೧೮ ಸೈನಿಕರನ್ನು ಕೊಂದಿದ್ದರು.

ಭಾರತೀಯ ನೆಲದಲ್ಲಿ ಹಾಗೂ ಮಯನ್ಮಾರ್ ದೇಶದ ಕೆಲವು ಭಾಗಗಳಲ್ಲಿ ಭಯೋತ್ಪಾದಕ ಗುಂಪುಗಳನ್ನು ನಾಶಪಡಿಸಲು ಸೇನೆ ನಡೆಸಿದ ಅಪೂರ್ವ ಕಾರ್ಯಾಚರಣೆ ಇದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೆ ಮಣಿಪುರ ಮತ್ತು ನಾಗಾಲ್ಯಾಂಡಿನಲ್ಲು ಭಯೋತ್ಪಾದ್ಕಾರ ಅಟ್ಟಡಗಿಸಲು ಸೇನೆ ಕಾರ್ಯಾಚರಣೆ ನಡೆಸಿದೆ.

"ಮೃತಪಟ್ಟ ಭಯೋತ್ಪಾದಕರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಆದರೆ ಇದು 40 ಕ್ಕೂ  ಹೆಚ್ಚಿರಬಹುದು. ಭಯೋತ್ಪಾದಕರಲ್ಲಿದ್ದ ಅಪಾರ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ. ಈ ದಾಳಿಯಲ್ಲಿ ವಿಶೇಷ ಪಡೆಗಳ ಯಾವುದೇ ಸೈನಿಕರು ಗಾಯಗೊಂಡಿಲ್ಲ. ಭಯೋತ್ಪಾದಕರನ್ನು ಹುಡುಕಿ ಅಟ್ಟಡಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ" ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ದಾಳಿಯ ವೇಳೆಯಲ್ಲಿ ಭಾರತೀಯ ವೈಮಾನಿಕ ದಳದ ಎಂಐ-೧೭ ವಿಮಾನದಿಂದ ಕಾಡಿನೊಳಗೆ ವಿಶೇಷ ಪಡೆಗಳ ಕಮ್ಯಾಂಡೊಗಳನ್ನು ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ನಾವು ಮಯನ್ಮಾರ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಎರಡು ಸೇನೆಗಳ ನಡುವಿನ ಸಹಕಾರದ ಇತಿಹಾಸವೇ ಇದೆ. ಭಯೋತ್ಪಾದಕರ ನಿರ್ಮೂಲನೆಗೆ ಎರಡು ಸೇನೆಗಳು ಒಟ್ಟಾಗಿ ಕೆಲಸ ಮಾಡಲಿವೆ" ಎಂದು ಮೇಜರ್ ಜನರಲ್ ರಣಬೀರ್ ಸಿಂಗ್ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com