ಅಸಾರಂ ಜಾಮೀನು ಅರ್ಜಿ: ವಾದಕ್ಕೆ ಮೂರನೆ ಬಾರಿ ಗೈರುಹಾಜರಾದ ವಕೀಲ ಸ್ವಾಮಿ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ
ಬಿಜೆಪಿ ಮುಖಂಡ ವಕೀಲ ಸುಬ್ರಮಣ್ಯ ಸ್ವಾಮಿ
ಬಿಜೆಪಿ ಮುಖಂಡ ವಕೀಲ ಸುಬ್ರಮಣ್ಯ ಸ್ವಾಮಿ

ಜೋಧಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ವಕೀಲ ಸುಬ್ರಮಣ್ಯ ಸ್ವಾಮಿ ಮೂರನೆ ಬಾರಿಗೆ ಪ್ರಾದೇಶಿಕ ಕೋರ್ಟ್ ನಲ್ಲಿ ವಾದ ಮಾಡುವುದರಿಂದ ತಪ್ಪಿಸಿಕೊಂಡಿದ್ದಾರೆ.

ಈಗ ಕೋರ್ಟ್ ಜೂನ್ ೧೬ಕ್ಕೆ ಹೊಸ ದಿನಾಂಕ ನಿಗದಿಪಡಿಸಿದೆ. ಸದ್ಯಕ್ಕೆ ಅಸಾರಂ ಅವರನ್ನು ಒಂದೂವರೆ ವರ್ಷದಿಂದ ಜೋಧಪುರ ಜೈಲಿನಲ್ಲಿ ಇಡಲಾಗಿದೆ.

ಬಿಜೆಪಿ ಮುಖಂಡ ಸ್ವಾಮಿ ಅಸಾರಂ ಬಾಪು ಅವರಿಗೆ ಜಾಮೀನು ಕೋರಿ ಕೋರ್ಟ್ ನಲ್ಲಿ ಮೇ ೨೩ ರಂದು ಅರ್ಜಿ ಸಲ್ಲಿಸಿದ್ದರು ಹಾಗು ಕೋರ್ಟ್ ಮೇ ೨೬ ರಂದು ವಿಚಾರಣೆಗೆ ಕರೆದಿತ್ತು.

ಆದರೆ ಆ ದಿನ ಸ್ವಾಮಿ ಕೋರ್ಟಿಗೆ ಹಾಜರಾಗಲಿಲ್ಲ. ನಂತರ ಜೂನ್ ೨ಕ್ಕೆ ಕೋರ್ಟ್ ವಿಚಾರಣೆಯನ್ನು ಮುಂದೂಡಿತು ಎಂದು ಸಂಸ್ತ್ರಸ್ತ ಬಾಲಕಿಯ ವಕೀಲ ಪಿ ಸಿ ಸೋಲಂಕಿ ತಿಳಿಸಿದ್ದಾರೆ.

ಜೂನ್ ಎರಡರಂದು ಕೂಡ ಸ್ವಾಮಿ ಕೋರ್ಟಿಗೆ ಹಾಜರಾಗಲಿಲ್ಲ, ನಂತರ ಕೋರ್ಟ್ ನೆನ್ನೆಗೆ ಅಂದರೆ ಜೂನ್ ೯ಕ್ಕೆ ವಿಚಾರಣೆ ಮುಂದೂಡಿತ್ತು. ನೆನ್ನೆ ಕೂಡ ವಾದ ಮಾಡಲು ಸ್ವಾಮಿ ಬರಲಿಲ್ಲವಾದ್ದರಿಂದ ಜೂನ್ ೧೬ಕ್ಕೆ ಮುಂದೂಡಲಾಗಿದೆ.

ಸ್ವಾಮಿಯವರ ಗೈರುಹಾಜರಿಯ ಬಗ್ಗೆ ಅಸಾರಂ "ಅವರು ಒಳ್ಳೆಯ ಮನುಷ್ಯ. ಖಂಡಿತಾ  ಬರುತ್ತಾರೆ. ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸಬಾರದು" ಎಂದಿದ್ದಾರೆ.

ಇದು ಅಸಾರಂ ಸಲಿಸುವ ೬ನೆ ಜಾಮೀನು ಅರ್ಜಿ. ಈ ಹಿಂದೆ ಟ್ರಯಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟುಗಳಲ್ಲಿ ೫ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com