
ಮೈಸೂರು: ವಿದೇಶದಿಂದ ದೇಣಿಗೆ ಪಡೆಯುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮನನೊಂದು ಸಮಾಜ ಪರಿವರ್ತನಾ ಸಮೂದಾಯದ ಮುಖ್ಯಸ್ಥ ಎಸ್.ಆರ್. ಹಿರೆಮಠ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಘಟನೆ ಶನಿವಾರ ನಡೆಯಿತು.
ನಾನು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು 12ರಿಂದ 14 ವರ್ಷಗಳ ಕಾಲ ವಿದೇಶದಲ್ಲಿದ್ದೆ. ಹೀಗಾಗಿ ಅವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಹಾಗಂತ ನಾನು ಆ ದುಡ್ಡಿನಲ್ಲಿ ಐಷಾರಾಮಿಯಾದ ಜೀವನ ಮಾಡುತ್ತಿಲ್ಲ ಎಂದರು.
ನಾನು ಈಗಲೂ ಆಟೋ ಹಾಗೂ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತೇನೆ. ಸರಳ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದರು.
Advertisement