ರಂಜಾನ್ ತಿಂಗಳಲ್ಲಿ ಕದನವಿರಾಮ ಮನವಿ ತಿರಸ್ಕರಿಸಿದ ತಾಲಿಬಾನ್

ಆಫ್ಘಾನಿಸ್ಥಾನದ ಧರ್ಮಗುರುಗಳು ರಂಜಾನ್ ವೇಳೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ತಾಲಿಬಾನ್ ಭಯೋತ್ಪಾದಕ ಸಂಘಟನೆಗೆ ಮಾಡಿದ್ದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬುಲ್: ಆಫ್ಘಾನಿಸ್ಥಾನದ ಧರ್ಮಗುರುಗಳು ರಂಜಾನ್ ವೇಳೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ತಾಲಿಬಾನ್ ಭಯೋತ್ಪಾದಕ ಸಂಘಟನೆಗೆ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಮನವಿಯನ್ನು ನಾವು ತಿರಸ್ಕರಿಸಿರುವುದಲ್ಲದೆ ರಂಜಾನ್ ವೇಳೆಯಲ್ಲಿ ಹೆಚ್ಚಿನ ದಾಳಿಗಳನ್ನು ನಡೆಸುತ್ತೇವೆ ಎಂದು ತಾಲಿಬಾನ್ ವಕ್ತಾರ ತಿಳಿಸಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಇದಕ್ಕೂ ಮುಂಚೆ, ಜನರು ರಂಜಾನ್ ವೇಳೆಯಲ್ಲಿ ಪ್ರಾರ್ಥನೆಗೆ ತೊಡಗಿಸಿಕೊಳ್ಳಲು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಅವಕಾಶ ಮಾಡಿಕೊಡಬೇಕೆಂದು ತಾಲಿಬಾನಿಗೆ ಧರ್ಮಗುರುಗಳು ಕೇಳಿಕೊಂಡಿದ್ದರು.

ಜೂನ್ ೧೮ ರಂದು ಪ್ರಾರಂಭವಾಗಲಿರುವ ರಂಜಾನ್ ಆಚರಣೆಗಳು ಒಂದು ತಿಂಗಳವರೆಗೆ ನಡೆಯುತ್ತವೆ. ಇದು ಮುಸ್ಲಿಂ ಬಾಂಧವರಿಗೆ ಪವಿತ್ರ ತಿಂಗಳಾಗಿದ್ದು ಉಪವಾಸ, ಪ್ರಾರ್ಥನೆ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com