ಜಮ್ಮು ಕಾಶ್ಮೀರದ ಭಯೋತ್ಪಾದಕ ಘಟನೆಗಳಲ್ಲಿ ಶೇಕಡಾ ೨೫ ಇಳಿಮುಖ: ರಾಜನಾಥ್ ಸಿಂಗ್

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಬಂಧದ ಘಟನೆಗಳು ೨೫% ಇಳಿಮುಖ ಕಂಡಿವೆ ಹಾಗೂ ಭದ್ರತಾ ವಾತಾವರಣ ಗಣನೀಯವಾಗಿ ಉತ್ತಮಗೊಂಡಿದೆ
ಗೃಹ ಸಚಿವ ರಾಜನಾಥ್ ಸಿಂಗ್
ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಬಂಧದ ಘಟನೆಗಳು ೨೫% ಇಳಿಮುಖ ಕಂಡಿವೆ ಹಾಗೂ ಭದ್ರತಾ ವಾತಾವರಣ ಗಣನೀಯವಾಗಿ ಉತ್ತಮಗೊಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಇಂದು ತಿಳಿಸಿದ್ದಾರೆ.

"ರಾಜ್ಯದ ಅಥವಾ ದೇಶದ ಅಭಿವೃದ್ಧಿಗೆ ಬೇಕಿರುವ ಪೂರ್ವಾಪೇಕ್ಷೆ ಶಾಂತಿಯುತ ಮತ್ತು ಸುರಕ್ಷತಾ ವಾತಾವರಣ. ಇದನ್ನು ಸೃಶ್ಟಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಿದೆ.

"ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಉತ್ತಮಗೊಂಡಿದೆ ಎಂದು ತಿಳಿಸಲು ನಾನು ಇಚ್ಚಿಸುತ್ತೇನೆ. ಹಿಂಸೆ ಕೂಡ ಗಣನೀಯ ಇಳಿಮುಖ ಕಂಡಿದೆ. ಅಷ್ಟೇ ಅಲ್ಲ ಭಯೋತೊಪಾದಕ ಘಟನೆಗಳಲ್ಲೂ ೨೫% ಇಳಿಮುಖವಾಗಿದೆ" ಎಂದು ಗೃಹ ಸಚಿವರು ನವದೆಹಲಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ ಜೊತೆ ನಡೆದ ಜಂಟಿ ಪತ್ರಿಕಾ ಘೋಷ್ಠಿಯಲ್ಲಿ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ವಿತ್ತ ಸಚಿವರು ೨೪೩೭ ಕೋಟಿಯ ವಿಶೇಷ ಪ್ಯಾಕೇಜ್ ಕೂಡ ಘೋಷಿಸಿದ್ದಾರೆ. ಸತತ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಯ ಪರಿಹಾರಕ್ಕಾಗಿ ಈ ಸಹಾಯಧನ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com