ತನಿಖೆ ಸಂದರ್ಭದಲ್ಲಿ 'ಚಿತ್ರಹಿಂಸೆ' ನಿಷೇಧಿಸಲು ಅಮೇರಿಕಾ ಸೆನೆಟ್ ಮತ

ತನಿಖೆಯ ಸದರ್ಭದಲ್ಲಿ ಚಿತ್ರಹಿಂಸೆ ಬಳಸುವುದನ್ನು ನಿಷೇಧಿಸುವ ತಿದ್ದುಪಡಿಗೆ ಅಮೇರಿಕಾ ಸೆನೆಟ್ ಒಪ್ಪಿಗೆ ನೀಡಿದೆ ಎಂದು ಬುಧವಾರ ಮಾಧ್ಯವೊಂದು ವರದಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ತನಿಖೆಯ ಸದರ್ಭದಲ್ಲಿ ಚಿತ್ರಹಿಂಸೆ ಬಳಸುವುದನ್ನು ನಿಷೇಧಿಸುವ ತಿದ್ದುಪಡಿಗೆ ಅಮೇರಿಕಾ ಸೆನೆಟ್ ಒಪ್ಪಿಗೆ ನೀಡಿದೆ ಎಂದು ಬುಧವಾರ ಮಾಧ್ಯವೊಂದು ವರದಿ ಮಾಡಿದೆ.

ಇದಕ್ಕೆ ಅಮೇರಿಕಾ ಸೆನೆಟ್ ಸದಸ್ಯರು ಮತ ಚಲಾಯಿಸಿದ್ದು, ಹಿಂಸೆ ನಿಷೇಧಿಸುವುದರ ಪರವಾಗಿ ೭೮ ಮತಗಳು ಇದ್ದರೆ ವಿರೋಧಕ್ಕೆ ೨೧ ಮತಗಳು ಲಭಿಸಿದೆ.

"ಶಾಂತಿ ಮತ್ತು ಸ್ವಾತಂತ್ರಕ್ಕೆ ನಾವು ಬಳಸುವ ತಂತ್ರಗಳು ಎಂದಿಗೂ ಸರಿಯಾದ ಮಾರ್ಗದಲ್ಲಿರಬೇಕು ಹಾಗು ಗೌರವಯುತವಾಗಿರಬೇಕು" ಎಂದು ರಿಪಬ್ಲಿಕನ್ ಸೆನೇಟರ್ ಮತ್ತು ಈ ತಿದ್ದುಪಡಿಯ ಲೇಖಕ ಜಾನ್ ಮೆಕ್ ಕೈನ್ ತಿಳಿಸಿದ್ದಾರೆ.

"ನನ್ನ ಶತ್ರುಗಳು ಅಂತಸಾಕ್ಷಿಯಿಲ್ಲದೆ ವರ್ತಿಸುತ್ತಾರೆ ಆದರೆ ನಾವು ಹಾಗೆ ವರ್ತಿಸಬಾರದು" ಎಂದಿದ್ದಾರೆ ಮೆಕ್ ಕೈನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com