ಇಣುಕಿ ನೋಡಿದ ಭಾರತೀಯನಿಗೆ ದುಬೈನಲ್ಲಿ ಜೈಲುಶಿಕ್ಷೆ

ದುಬೈನಲ್ಲಿ ವಾಸವಾಗಿರುವ ಭಾರತೀಯ ಕೆಲಸಗಾರನೊಬ್ಬ ಮಸೀದಿಯ ಶೌಚಾಲಯದಲ್ಲಿ ಮಹಿಳೆಯೊಬ್ಬರನ್ನು ಇಣುಕಿ ನೋಡಿದ ಆರೋಪದ ಮೇಲೆ ಲೈಂಗಿಕ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: ದುಬೈನಲ್ಲಿ ವಾಸವಾಗಿರುವ ಭಾರತೀಯ ಕೆಲಸಗಾರನೊಬ್ಬ ಮಸೀದಿಯ ಶೌಚಾಲಯದಲ್ಲಿ ಮಹಿಳೆಯೊಬ್ಬರನ್ನು ಇಣುಕಿ ನೋಡಿದ ಆರೋಪದ ಮೇಲೆ ಲೈಂಗಿಕ ಕಿರುಕುಳ ನಿಡಿದ್ದಕ್ಕೆ ತಪ್ಪಿತಸ್ಥ ಎಂದು ಸಾಬೀತಾಗಿ ಸೋಮವಾರ ಮೂರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಮೂರು ತಿಂಗಳ ಜೈಲುಶಿಕ್ಷೆಯ ನಂತರ ೨೬ ವರ್ಷದ ಯುವಕನನ್ನು ಅವನ ದೇಶಕ್ಕೆ ವಾಪಸ್ ಕಳಿಸುವಂತೆ ಕೂಡ ಕೋರ್ಟ್ ಆದೇಶಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಆದರೆ ತಾನು ಶೌಚಾಲಯದ ಗೋಡೆಗಳು ಮತ್ತು ಫ್ಯಾನನ್ನು ಶುಚಿ ಮಾಡಲು ಒಳಹೊಕ್ಕಿದ್ದು ಎಂದಿದ್ದಾನೆ ಆ ಕೆಲಸಗಾರ.

ದೂರು ನೀಡಿರುವ ಸೌದಿ ಮಹಿಳೆ ಈ ಘಟನೆ ಮಾರ್ಚ್ ೧೧ ರಂದು ನಡೆಯಿತು ಎಂದಿದ್ದಾರೆ. "ನಾನು ಈ ಕೆಲಸಗಾರ ಗಿಡಗಳಿಗೆ ನೀರು ಹಾಕುವಾಗ ಅವನ ಮುಂದೆ ಹಾದುಹೋದೆ. ನಾನು ಶೌಚಾಲಯ ಒಳಹೊಕ್ಕಾಗ ಯಾರೂ ಇರಲಿಲ್ಲ, ಆದರೆ ಸ್ವಲ್ಪ ಸಮಯದ ನಂತರ ಹಿಂದಿರುಗಿ ನೋಡಿದರೆ ಅ ಕೆಲಸಗಾರ ನನ್ನನ್ನು ನೋಡುತ್ತಾ ನಿಂತಿದ್ದ" ಎಂದು ದೂರಿದ್ದಾರೆ.

ದಿನದ ಕೆಲವು ಘಂಟೆಗಳಲ್ಲಿ ಮಹಿಳೆಯರ ಶೌಚಾಲಯದೊಳಗೆ ಹೋಗಲು ಕೆಲಸಗಾರನಿಗೆ ಅವಕಾಶವಿದೆ ಎಂದು ಮೇಲ್ವಿಚಾರಕ ವಾದಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com