ವಿಜಯವಾಡ: ಕಳೆದವಾರ ಬಂಗಾಳಕೊಲ್ಲಿ ಸಾಗರದಲ್ಲಿ ಕಾಣೆಯಾಗಿದ್ದ ಒಂಭತ್ತು ಜನ ಆಂಧ್ರಪ್ರದೇಶನ ಮೀನುಗಾರರು ಮೃತಪಟ್ಟಿದ್ದಾರೆ ಎಂದು ಬದುಕುಳಿದ ಒಬ್ಬ ಮೀನುಗಾರ ತಿಳಿಸಿದ್ದಾರೆ. ಕಾಣೆಯಾದ ಮೀನುಗಾರರ ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಿಂದ ಒಂಭತ್ತು ಜನ ಮೀನುಗಾರರು ಬಂಗಾಳಾಕೊಲ್ಲಿಯ ತೀವ್ರ ಅಲೆಗಳಿಂದ ಹಡಗು ಮುಗುಜಿ ಬಲಿಯಾಗಿದ್ದಾರೆ ಎಂದು ಬದುಕುಳಿದ ಒಬ್ಬ ಮೀನುಗಾರ ತಿಳಿಸಿದ್ದಾರೆ.
ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬದುಕುಳಿದ ಮೀನುಗಾರ ವಿ ಕೋಟಯ್ಯ ಸಮುದ್ರದಲ್ಲಿ ಮೀನು ಹಿಡಿಯುವಾಗ ವಿಪರೀತ ಹವಾಮಾನದಿಂದ ತಮ್ಮ ಹಡಗುಗಳು ಮುಗುಚಿಕೊಂಡವು. ನನ್ನ ಕಣ್ಮುಂದೆಯೇ ೯ ಜನ ಮೀನುಗಾರರು ಹತರಾದರು. ನಾನು ಹಡಗನ್ನು ಹಿಡಿದು ತೀರಕ್ಕೆ ಕಷ್ಟಪಟ್ಟು ಬಂದು ಸೇರಿದೆ ಎಂದು ತಿಳಿಸಿದ್ದಾರೆ.
ಜೂ ೧೬ ರಿಂದ ಇವರ ದೋಣಿಯು ಒಳಗೊಂಡಂತೆ ಹಲವಾರು ದೋಣಿಗಳು ಕಾಕಿನಾಡ ತೀರದಿಂದ ಹೊರಟಿದ್ದವು.
೨೦ ಹಡಗುಗಳಲ್ಲಿದ ೧೦೦ ಜನ ಮೀನುಗಾರರು ಸುರಕ್ಷಿತವಾಗಿ ಹಿಂದಿರುಗಿದ್ದರೆ ಮತ್ತಿತರ ೨೩ ಹಡಗುಗಳ ೧೦೦ ಮೀನುಗಾರಾರು ಕಾಣೆಯಾಗಿದ್ದರು.
ಪೂರ್ವ ಗೋದಾವರಿ ಕಲೆಕ್ಟರ್ ಅರುಣ್ ಕುಮಾರ್ ತಿಳಿಸಿರುವಂತೆ ಮೂರು ಹೆಲಿಕ್ಯಾಪ್ಟರ್ ಗಳು ಕಾಣೆಯಾದ ಮೀನುಗಾರರನ್ನು ಹುಡುಕುತ್ತಿವೆ. ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement