ಐಐಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ಐಐಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ

ಆರ್ ಕೆ ನಗರ ಉಪಚುನಾವಣೆ ಮತದಾನ ಪ್ರಾರಂಭ; ಜಯಲಲಿತಾ ಕಣದಲ್ಲಿ

ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಾರಂಭವಾಗಿದೆ. ಬೂತ್ ಸಂಖ್ಯೆ ೧ ಮತ್ತು ೮೩ ಹೊರತಪಡಿಸಿ ಎಲ್ಲ ಮತಗಟ್ಟೆಗಳಲ್ಲು
Published on

ಚೆನ್ನೈ: ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಾರಂಭವಾಗಿದೆ. ಬೂತ್ ಸಂಖ್ಯೆ ೧ ಮತ್ತು ೮೩ ಹೊರತಪಡಿಸಿ ಎಲ್ಲ ಮತಗಟ್ಟೆಗಳಲ್ಲು ಯಾವುದೇ ತೊಂದರೆ ಇಲ್ಲ ವಿದ್ಯುನ್ಮಾನ ಮತಯಂತ್ರಗಳು ಕಾರ್ಯನಿರ್ವಹಿಸಿವೆ. ಆ ಮತಗಟ್ಟೆಗಳಲ್ಲೂ ಕೆಲವು ಕ್ಷಣಗಳ ಬಳಿಕ ಯಂತ್ರಗಳನ್ನು ರಿಪೇರಿ ಮಾಡಲಾಗಿದೆ. ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸರದಿಯಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಐ ಐಡಿ ಎಂ ಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನೂ ಒಳಗೊಂಡಂತೆ ೨೮ ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ. ಇಷ್ಟೊಂದು ಸ್ಪರ್ಧಿಗಳಿದ್ದರು ನಿಜವಾದ ಸ್ಪರ್ಧೆ ಇರುವುದು ಜಯಲಲಿತಾ ಮತ್ತು ಸಿಪಿಐ ಪಕ್ಷದ ಸಿ ಮಹೇಂದ್ರನ್ ನಡುವೆ ಎನ್ನಲಾಗಿದೆ.

ಪಿ ವೆಟ್ರಿವೇಲ್ ಅವರು ರಾಜೀನಾಮೆ ನೀಡಿದ್ದರಿಂದ ಆರ್ ಕೆ ನಗರ ಕ್ಷೇತ್ರಕ್ಕೆ ಮರುಚುನಾವಣೆ ನಡೆಸಲಾಗಿದೆ. ಈ ಹಿಂದೆ ೨೦೧೧ರಲ್ಲಿ ಶ್ರೀರಂಗಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಯಲಿತ ಮೊದಲಬಾರಿಗೆ ಚೆನ್ನೈನ ಕ್ಷೇತ್ರವೊಂದರಲ್ಲಿ ಸ್ಪರ್ಧಿಸುತ್ತಿರುವುದು.

ವಿರೋಧ ಪಕ್ಷಗಳಾದ ಡಿಎಂಕೆ, ಎಂಡಿಎಂಕೆ, ಕಾಂಗ್ರೆಸ್, ಪಿಎಂಕೆ, ವಿಸಿಕೆ, ಟಿಎಂಸಿ ಮತ್ತು ಬಿಜೆಪಿ ನಾಯಕತ್ವದ ಎನ್ ಡಿ ಎ ವಿವಿಧ ಕಾರಣಗಳಿಗಾಗಿ ಸ್ಪರ್ಧೆಯಿಂದ ದೂರವುಳಿದಿವೆ. ೨೦೧೧ರಿಂದ ನಡೆದ ಆರು ಉಪಚುನಾವನೆಗಳಲ್ಲಿ ಎಐಡಿಎಂಕೆ ಜಯಭೇರಿ ಭಾರಿಸಿದೆ.

೨.೪೩ ಲಕ್ಷ ಮತದಾರರಿರುವ ಆರ್ ಕೆ ನಗರ ಕ್ಷೇತ್ರದ ಮತ ಎಣಿಕೆ ಜೂನ್ ೩೦ ರಂದು ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com