
ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು 'ಲಲಿತ್ ಗೇಟ್' ಪ್ರಕರಣದಲ್ಲಿ ರಾಜೀನಾಮೆ ನಿಡಬೇಕೆಂಬ ಒತ್ತಡ ಹೆಚ್ಚುತ್ತಿದ್ದರೂ ವಿಚಲಿತರಾಗದೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ರಾಜೆ ಶನಿವಾರ ದೆಹಲಿಗೆ ಬಂದಿಳಿದಿದ್ದಾರೆ.
ಕೆಂಪು ಸೀರೆಯುಟ್ಟಿದ್ದ ರಾಜೆ ಹೆಲಿಕ್ಯಾಪ್ಟರ್ ನಲ್ಲಿ ದೆಹಲಿಗೆ ಬಂದಿಳಿದಿದ್ದಾರೆ.
ವರದಿಗಳ ಪ್ರಕಾರ ಜೂನ್ ೨೮ ರಂದು ನಡೆಯಲಿರುವ ನೀತಿ ಆಯೋಗದ ಉಪ ಸಮಿತಿಯ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಬಿಜೆಪಿ ಶಾಸಕರನ್ನು ಕರೆದು ತನಗೆ ಬೆಂಬಲ ಮತ್ತು ನಿಯತ್ತು ಸೂಚಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಸಭೆ ನಡೆಸಿದ್ದರು ಎಂಬ ವರದಿಯನ್ನು ರಾಜೆ ಅಲ್ಲಗೆಳೆದಿದ್ದಾರೆ.
ಲಲಿತ್ ಮೋದಿ ಅವರಿಗೆ ವಿದೇಶಕ್ಕೆ ತೆರಳಲು ಪ್ರವಾಸ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ್ದ ಆರೋಪದ ಮೇಲೆ ವಿಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೆ ಅವರ ರಾಜೀನಾಮೆ ಕೋರಿ ಒತ್ತಡ ಹೆಚ್ಚಿಸಿವೆ.
Advertisement