ವಿಶ್ವದ ಅತಿ ದೊಡ್ಡ ಉದ್ಯೋಗದಾತರಲ್ಲಿ ಭಾರತೀಯ ರೈಲ್ವೇ ಕೂಡ ಒಂದು

ಎರಡು ಭಾರತೀಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಸೇನೆ ಮತ್ತು ರೈಲ್ವೆ ವಿಶ್ವದ ಅತಿ ದೊಡ್ಡ ಉದ್ಯೋಗದಾತರ ಸಾಲಿನಲ್ಲಿ ನಿಲ್ಲುತ್ತವೆ. ಎರಡೂ ಸಂಸ್ಥೆಗಳು ಒಟ್ಟಿಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ಭಾರತೀಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಸೇನೆ ಮತ್ತು ರೈಲ್ವೆ ವಿಶ್ವದ ಅತಿ ದೊಡ್ಡ ಉದ್ಯೋಗದಾತರ ಸಾಲಿನಲ್ಲಿ ನಿಲ್ಲುತ್ತವೆ. ಎರಡೂ ಸಂಸ್ಥೆಗಳು ಒಟ್ಟಿಗೆ ೨.೭ ದಶಲಕ್ಷ ಜನಕ್ಕೆ ಉದ್ಯೋಗ ನೀಡಿವೆ ಎಂದು ವರದಿಯೊಂದು ತಿಳಿಸಿದೆ.

ಭಾರತೀಯ ರೈಲ್ವೇ ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗದಾತ ಎಂದು ಕರೆಯಲಾಗುತ್ತಿತ್ತು ಆದರೆ ಈ ವರದಿಯ ಅಧ್ಯಯನದ ಪ್ರಕಾರ ಈ ಸಂಸ್ಥೆ ಎಂಟನೇ ಸ್ಥಾನದಲ್ಲಿದೆ ಹಾಗೂ ೧.೪ ದಶಲಕ್ಷ ನೌಕರರನ್ನು ಹೊಂದಿದೆ ಎಂದು ತಿಳಿಸಿದೆ.

ರೈಲ್ವೆಯ ನಂತರ ಭಾರತೀಯ ಸೇನಾ ಪಡೆ ೧.೩ ದಶಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಸಂಶೋಧನೆಯ ಪ್ರಕಾರ ಅಮೇರಿಕಾ ಭದ್ರತಾ ಇಲಾಖೆ ವಿಶ್ವದ ಅತಿ ದೊಡ್ಡ ಉದ್ಯೋಗದಾತ ಮತ್ತು ಇದು ೩.೨ ದಶಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದು ತಿಳಿಸಿದೆ.  

೨.೩ ದಶಲಕ್ಷ ನೌಕರರೊಂದಿಗೆ ಎರಡನೆ ಸ್ಥಾನದಲ್ಲಿ ಚೈನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ೨.೧ ದಶಲಕ್ಷ ನೌಕರರೊಂದಿಗೆ ಅಮೇರಿಕಾದ ಸೂಪರ್ ಮಾರ್ಕೆಟ್ ಸರಣಿ ವಾಲ್ಮಾರ್ಟ್ ಇದೆ.

ನಂತರದ ಸ್ಥಾನಗಳಲ್ಲಿ ೧.೯ ದಶಲಕ್ಷ ಉದ್ಯೋಗಿಗಳೊಂದಿಗೆ ಮೆಕ್ ಡೊನಾಲ್ಡ್, ೧.೭ ದಶಲಕ್ಷ ನೌಕರರೊಂದಿಗೆ ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ, ೧.೬ ದಶಲಕ್ಷ ನೌಕರರೊಂದಿಗೆ ಚೈನಾ ಪೆಟ್ರೋಲಿಯಮ್ ಕಾರ್ಪೊರೇಶನ್ ಸ್ಥಾನ ಗಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com