
ಶ್ರೀನಗರ: ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ೨ ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆ ಜುಲೈ ೨ ರಿಂದ ಪ್ರಾರಂಭವಾಗಲಿದೆ.
ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯದ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಗೃಹಸಚಿವರು ಈ ವರ್ಷದ ಅಮರನಾಥ ಯಾತ್ರೆಯ ಭದ್ರತಾ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
"ಅವರು ಜುಲೈ ೨ ರಂದು ಪವಿತ್ರ ಅಮರನಾಥ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಲಿರುವ ಮೊದಲ ಸರಣಿಯ ಭಕ್ತರಲ್ಲಿ ಒಬ್ಬರಾಗಿರುತ್ತಾರೆ" ಎಂದು ಕೂಡ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಪವಿತ್ರ ಕ್ಷೇತ್ರದ ಹಿಮಾಲಯ ಗುಹಾ ದೇವಾಲಯದ ತೀರ್ಥಯಾತ್ರೆ ಜುಲೈ ೨ ರಿಂದ ಆಗಸ್ಟ್ ೨೯ರವರೆಗೆ ೫೯ದಿನಗಳ ಕಾಲ ನಡೆಯಲಿದೆ.
ಸಮುದ್ರಮಟ್ಟದಿಮ್ದ ೧೪೫೦೦ ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯದಲ್ಲಿ ಮಾನ್ಸೂನ್ ವೇಳೆಯಲ್ಲಿ ಹಿಮ ಸ್ವಾಭಾವಿಕವಾಗಿ ಲಿಂಗದ ರೂಪ ತಾಳುತ್ತದೆ. ೩೪ ಕಿಮೀ ಸಾಂಪ್ರದಾಯಿಕ ಫಹಲ್ಗಂ ಮಾರ್ಗ ಮೂಲಕ ಈ ಪವಿತ್ರ ತಾಣಕ್ಕೆ ತೆರಳಲು ನಾಲ್ಕು ದಿನದ ಚಾರಣ ಅಗತ್ಯ.
Advertisement